
ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಭೂಪಾಲ್: ಮಧ್ಯಪ್ರದೇಶದ ಪೊಲೀಸ್ ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆ ಪಠಣದ ಅವಧಿಯನ್ನು ನಿಗದಿಪಡಿಸುವಂತೆ ಸೂಚನೆ ನೀಡಲಾಗಿದೆ.
ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ರಾಜಾ ಬಾಬು ಸಿಂಗ್, ಮೇಲ್ವಿಚಾರಕರಿಗೆ ರಾಜ್ಯದಲ್ಲಿನ 8 ತರಬೇತಿ ಕೇಂದ್ರಗಳಲ್ಲಿ ಭಗವದ್ಗೀತೆ ಪಾಠದ ಅವಧಿಯನ್ನು ನಿಗದಿಪಡಿಸುವಂತೆ ಸೂಚಿಸಿದ್ದಾರೆ. ವಿವಿಧ ಕೇಂದ್ರಗಳಲ್ಲಿ ಸುಮಾರು 4 ಸಾವಿರ ಮಹಿಳೆಯರು ಮತ್ತು ಪುರುಷರು ಜುಲೈನಿಂದ 9 ತಿಂಗಳ ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ.
ಈ ಹಿಂದೆ ಜುಲೈನಲ್ಲಿ ತರಬೇತಿಗೆ ಚಾಲನೆ ನೀಡಿದ್ದ ಸಿಂಗ್, ಶಿಸ್ತು ಅಳವಡಿಸಿಕೊಳ್ಳುವಂತೆ ಮಾಡಲು ರಾಮಚರಿತ ಮಾನಸವನ್ನು ಬೋಧಿಸುವಂತೆ ಸೂಚಿಸಿದ್ದರು. ಈಗ ಭಗವದ್ಗೀತೆ ಓದುವಂತೆ ಸೂಚಿಸಿರುವ ಅವರು, ‘ಭಗವದ್ಗೀತೆ ನಮ್ಮ ಸನಾತನ ಗ್ರಂಥ. ಇದರ ನಿಯಮಿತ ಪಠಣವು ಪೊಲೀಸ್ ತರಬೇತಿ ಪಡೆಯುವವರಿಗೆ ನೀತಿವಂತ ಜೀವನವನ್ನು ನಡೆಸಲು ಖಂಡಿತವಾಗಿಯೂ ಮಾರ್ಗದರ್ಶನ ನೀಡುತ್ತದೆ ಮತ್ತು ಅವರ ಜೀವನವು ಉತ್ತಮಗೊಳ್ಳುತ್ತದೆ’ ಎಂದು ತಿಳಿಸಿದ್ದಾರೆ.
ಸಿಂಗ್ ಅವರು ಗ್ವಾಲಿಯರ್ ರೇಂಜ್‌ನಲ್ಲಿ ನಿಯುಕ್ತಿಗೊಂಡಿದ್ದ ವೇಳೆ ಕೆಲವು ಸ್ಥಳೀಯ ಜೈಲುಗಳಲ್ಲಿರುವ ಕೈದಿಗಳಿಗೆ ಭಗವದ್ಗೀತೆ ಪುಸ್ತಕವನ್ನು ಹಂಚುವ ಅಭಿಯಾನ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.