ADVERTISEMENT

ಮಧ್ಯಪ್ರದೇಶ ಪ್ರವೇಶಿಸಿದ ‘ಭಾರತ್ ಜೋಡೊ’ ಯಾತ್ರೆ

ಪಿಟಿಐ
Published 23 ನವೆಂಬರ್ 2022, 13:53 IST
Last Updated 23 ನವೆಂಬರ್ 2022, 13:53 IST
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಗೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆಯು ಪ್ರವೇಶಿಸಿತು –ಪಿಟಿಐ ಚಿತ್ರ 
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಗೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆಯು ಪ್ರವೇಶಿಸಿತು –ಪಿಟಿಐ ಚಿತ್ರ    

ಬೋದರ್ಲಿ (ಮಧ್ಯಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆಯು ಬುಧವಾರ ಬೆಳಿಗ್ಗೆ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಬೋದರ್ಲಿ ಗ್ರಾಮ ಪ್ರವೇಶಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್, ‘ಈ ಅಭಿಯಾನವು ಸಮಾಜದಲ್ಲಿ ಹರಡುತ್ತಿರುವ ದ್ವೇಷ, ಹಿಂಸೆ ಮತ್ತು ಭಯದ ವಿರುದ್ಧವಾಗಿದೆ’ ಎಂದರು.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು ಮಧ್ಯಪ್ರದೇಶ ಪಕ್ಷದ ಮುಖ್ಯಸ್ಥ ಕಮಲ್ ನಾಥ್ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಿದರು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸುಮಾರು 6 ಸಾವಿರ ಜನಸಂಖ್ಯೆ ಇರುವ ಬೋದರ್ಲಿ ಗ್ರಾಮವನ್ನು ಬಾಳೆ ಎಲೆಗಳಿಂದ ಅಲಂಕರಿಸಲಾಗಿತ್ತು. ಈ ಗ್ರಾಮವು ಬಾಳೆಹಣ್ಣಿನ ಕೃಷಿಗೆ ಪ್ರಸಿದ್ಧಿಯಾಗಿದೆ.

ಸಾವರ್ಕರ್ ಹೇಳಿಕೆ ಮುಗಿದ ಅಧ್ಯಾಯ (ಬುರ್ಹಾನ್‌ಪುರ): ‘ಸಾವರ್ಕರ್ ಅವರ ಕುರಿತು ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆಯು ಮುಗಿದ ಅಧ್ಯಾಯವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಯಾವಾಗ ನಮ್ಮ ನಾಯಕರ ವಿರುದ್ಧ ಸುಳ್ಳು ಹೇಳುವುದನ್ನು ನಿಲ್ಲಿಸುತ್ತದೆಯೋ, ನಾವು ಕೂಡಾ ಅವರ ನಾಯಕರ ವಿರುದ್ಧ ಸತ್ಯ ಹೇಳುವುದನ್ನು ನಿಲ್ಲಿಸುತ್ತೇವೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.