ADVERTISEMENT

BJP ಕಚೇರಿ ಮೇಲೆ ನಿಂತು ಯಾತ್ರೆ ನೋಡುತ್ತಿದ್ದವರಿಗೆ ರಾಹುಲ್ ‘ಫ್ಲೈಯಿಂಗ್ ಕಿಸ್‘‌

ಬಿಜೆಪಿ ಕಚೇರಿ ಮೇಲೆ ನಿಂತು ಯಾತ್ರೆ ವೀಕ್ಷಿಸುತ್ತಿದ್ದ ಮಂದಿಗೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2022, 6:45 IST
Last Updated 6 ಡಿಸೆಂಬರ್ 2022, 6:45 IST
ಬಿಜೆಪಿ ಕಚೇರಿ ಮೇಲೆ ನಿಂತಿರುವವರಿಗೆ ಕೈ ಬೀಸುತ್ತಿತುವ ರಾಹುಲ್ ಗಾಂಧಿ (ಚಿತ್ರ– ಟ್ವಿಟರ್ @Rajasthan_PYC)
ಬಿಜೆಪಿ ಕಚೇರಿ ಮೇಲೆ ನಿಂತಿರುವವರಿಗೆ ಕೈ ಬೀಸುತ್ತಿತುವ ರಾಹುಲ್ ಗಾಂಧಿ (ಚಿತ್ರ– ಟ್ವಿಟರ್ @Rajasthan_PYC)   

ಜಾಲ್ವರ್ (ರಾಜಸ್ಥಾನ): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದ ಭಾರತ್ ಜೋಡೊ ಯಾತ್ರೆ ರಾಜಸ್ಥಾನದಲ್ಲಿ ಸಾಗಿದೆ. ಮಂಗಳವಾರ ಮುಂಜಾನೆ ಖೇಲ್‌ ಸಂಕುಲ್‌ನಿಂದ ಯಾತ್ರೆ ಆರಂಭವಾಗಿದ್ದು, ಜಾಲ್ವರ್‌ ನಗರವನ್ನು ದಾಟಿ ಮುಂದೆ ಸಾಗಿತು.

ಜಾಲ್ವರ್ ತಲುಪಿದ ವೇಳೆ, ರಸ್ತೆ ಬದಿಯಲ್ಲಿದ್ದ ಬಿಜೆ‍ಪಿ ಕಚೇರಿಯ ಮಹಡಿ ಮೇಲೆ ಹಲವು ಮಂದಿ ಯಾತ್ರೆಯ ಕ್ಷಣಗಳನ್ನುಕಣ್ತುಂಬಿಸಿಕೊಳ್ಳಲು ನಿಂತಿದ್ದರು. ಅವರಿಗೆ ‘ಫ್ಲೈಯಿಂಗ್‌ ಕಿಸ್‌‘ ನೀಡುವ ಮೂಲಕ ರಾಹುಲ್‌ ಗಾಂಧಿ ಧನ್ಯವಾದ ಸಲ್ಲಿಸಿದರು.

नफ़रत का जवाब सिर्फ़ मोहब्बत है !!❤️‍🔥💗
ये तस्वीर देखिये..👇🏻 pic.twitter.com/IHkagK97xW

ADVERTISEMENT

ಅವರು ಹೀಗೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ರಾಜಸ್ಥಾನ ಯುವ ಕಾಂಗ್ರೆಸ್‌, ಈ ವಿಡಿಯೊವನ್ನು ಟ್ವೀಟ್‌ ಮಾಡಿ ‘ದ್ವೇಷಕ್ಕೆ ಉತ್ತರ ಪ್ರೀತಿ ಮಾತ್ರ, ಈ ಚಿತ್ರ ನೋಡಿ‘ ಎಂದು ಹೇಳಿದೆ.

ರಾಹುಲ್‌ ಗಾಂಧಿ ಅವರ ಯಾತ್ರೆಗೆ ರಾಜಸ್ಥಾನ ಸಿಎಂ ಅಶೋಕ್‌ ಗೆಹಲೋತ್‌, ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್‌ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.