ADVERTISEMENT

ಭಾರತ್ ಜೋಡೊ ಯಾತ್ರೆ: ಬಾಲಕಿಗೆ ಚಪ್ಪಲಿ ಧರಿಸಲು ನೆರವಾದ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 12:33 IST
Last Updated 18 ಸೆಪ್ಟೆಂಬರ್ 2022, 12:33 IST
ಚಿತ್ರ ಕೃಪೆ: Twitter/@dnetta
ಚಿತ್ರ ಕೃಪೆ: Twitter/@dnetta   

ತಿರುವನಂತಪುರ: ಭಾರತ್ ಜೋಡೊ ಯಾತ್ರೆಯ ವೇಳೆ ಪುಟ್ಟ ಬಾಲಕಿಗೆ ಚಪ್ಪಲಿ ಧರಿಸಲು ನೆರವಾಗುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನ ಸಳೆದಿದ್ದಾರೆ.

ಮಹಿಳಾ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ನೀಟಾ ಡಿಸೋಜಾ, ತಮ್ಮ ಟ್ವಿಟರ್‌ನಲ್ಲಿ ಈ ಕುರಿತು ವಿಡಿಯೊ ಹಾಗೂ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಇದು ರಾಹುಲ್ ಗಾಂಧಿ ಅವರ ಸರಳ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಭಾರತ್ ಜೋಡೊ ಯಾತ್ರೆಯ 11ನೇ ದಿನವಾದ ಭಾನುವಾರ ಕೇರಳದ ಹರಿಪಾಡ್‌ನಿಂದ ರಾಹುಲ್ ಗಾಂಧಿ ಪಾದಯಾತ್ರೆ ಮುಂದುವರಿಸಿದರು.

ಪಾದಯಾತ್ರೆವೇಳೆ ದಾರಿ ಮಧ್ಯೆ ಬಾಲಕಿಗೆ ಚಪ್ಪಲಿ ಧರಿಸಲುರಾಹುಲ್ಗಾಂಧಿ ನೆರವಾಗಿದ್ದಾರೆ.

ಏತನ್ಮದ್ಯೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಭಾನುವಾರವೂ ವಾಗ್ದಾಳಿ ನಡೆಸಿದ್ದಾರೆ.

ಸಾಮರಸ್ಯವಿಲ್ಲದೆ, ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಪ್ರಗತಿಯಿಲ್ಲದೆ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಉದ್ಯೋಗವಿಲ್ಲದೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.