ADVERTISEMENT

ಭೂಪೇನ್‌ ಹಜಾರಿಕಾ ಭಾರತ ಕಂಡ ಅದ್ಭುತ ಗಾಯಕ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 8 ಸೆಪ್ಟೆಂಬರ್ 2025, 15:55 IST
Last Updated 8 ಸೆಪ್ಟೆಂಬರ್ 2025, 15:55 IST
   

ನವದೆಹಲಿ: ಭಾರತ ಕಂಡ ಅತ್ಯಂತ ಅದ್ಭುತ ಗಾಯಕರಲ್ಲಿ ಭೂಪೇನ್‌ ಹಜಾರಿಕಾ ಅವರೂ ಒಬ್ಬರು ಎಂದು ‍ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಭೂಪೇನ್‌ ಅವರ 99ನೇ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿರುವ ಪ್ರಧಾನಿ ಮೋದಿ, ಭೂಪೇನ್‌ ಅವರ ಕುರಿತಾಗಿ ತಾವು ಬರೆದಿರುವ ಲೇಖನವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಭೂಪೇನ್‌ ನಮಗೆ ನೀಡಿದ್ದು ಬರೀ ಸಂಗೀತವಲ್ಲ, ಅದನ್ನೂ ಮೀರಿದ ಭಾವನೆಗಳನ್ನು. ಅವರು ಬರೀ ಪ್ರಖ್ಯಾತ ಕಂಠವಷ್ಟೇ ಆಗಿರಲಿಲ್ಲ, ಜನರ ಹೃದಯದ ಬಡಿತವಾಗಿದ್ದರು. ಅವರ ಹಾಡುಗಳನ್ನು ಕೇಳುತ್ತಲೇ ಪೀಳಿಗೆಗಳು ಬೆಳೆದಿವೆ. ಅವರ ಪ್ರತಿ ಪದವೂ ಕರುಣೆ, ಸಾಮಾಜಿಕ ನ್ಯಾಯ, ಏಕತೆಯನ್ನು ಪ್ರತಿಬಿಂಬಿಸುತ್ತಿದ್ದವು’ ಎಂದು ಮೋದಿ ಸ್ಮರಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.