ADVERTISEMENT

ಕಾಮಾಕ್ಯ ದೇಗುಲ, ಕಾಜಿರಂಗ ಉದ್ಯಾನಕ್ಕೆ ಭೇಟಿ ನೀಡಲಿರುವ ಭೂತಾನ್ ದೊರೆ ವಾಂಗಚುಕ್

ಪಿಟಿಐ
Published 3 ನವೆಂಬರ್ 2023, 7:35 IST
Last Updated 3 ನವೆಂಬರ್ 2023, 7:35 IST
<div class="paragraphs"><p>ಗುವಾಹತಿಯ ಲೋಕಪ್ರಿಯ ಗೋಪಿನಾಥ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ&nbsp;ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗಚುಕ್‌ ಅವರನ್ನು&nbsp;ಹಿಮಂತ ಬಿಸ್ವಾ ಶರ್ಮಾ ಸ್ವಾಗತಿಸಿದರು</p></div>

ಗುವಾಹತಿಯ ಲೋಕಪ್ರಿಯ ಗೋಪಿನಾಥ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗಚುಕ್‌ ಅವರನ್ನು ಹಿಮಂತ ಬಿಸ್ವಾ ಶರ್ಮಾ ಸ್ವಾಗತಿಸಿದರು

   

ಅರಿಂದಾಮ್ ಬಗ್ಚಿ ಎಕ್ಸ್‌ ಖಾತೆ

ಗುವಹಾತಿ: ಭೂತಾನ್ ದೊರೆ ಜಿಗ್ಮೆ ಖೆಸರ್ ನಾಮಗ್ಯಾಲ್ ವಾಂಗಚುಕ್‌ ಅವರು ತಮ್ಮ ನಾಲ್ಕು ದಿನಗಳ ಭೇಟಿಗಾಗಿ ಅಸ್ಸಾಂಗೆ ಬಂದಿದ್ದು, ಇಲ್ಲಿನ ಲೋಕಪ್ರಿಯ ಗೋಪಿನಾಥ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು.

ADVERTISEMENT

43 ವರ್ಷದ ಭೂತಾನ್ ದೊರೆ ರಾಜ್ಯದ ನೀಲ್‌ಚಲ್ ಪರ್ವತದ ಮೇಲಿರುವ ಕಾಮಾಕ್ಯ ಮಂದಿರ, ಒಂದು ಕೊಂಬಿನ ಖಡ್ಗಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಿದ್ದಾರೆ.

ಅಸ್ಸಾಂಗೆ ಬಂದಿಳಿದ ವಾಂಗಚುಕ್ ಅವರಿಗೆ ಅಸ್ಸಾಂನ ಸಾಂಪ್ರದಾಯಿಕ ಶಾಲು ಗೆಮೊಚಾವನ್ನು ನೀಡಿ ಶರ್ಮಾ ಸ್ವಾಗತಿಸಿದರು.

ಶುಕ್ರವಾರ ಸಂಜೆ ವಾಂಗಚುಕ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಮಾತುಕತೆ ನಡೆಸಲಿದ್ದಾರೆ. ರಾಜ್ಯಪಾಲ ಗುಲಾಬ್‌ ಚಂದ್‌ ಕಠಾರಿಯಾ ಅವರು ದೊರೆಗಾಗಿ ಔತಣಕೂಟ ಆಯೋಜಿಸಿದ್ದಾರೆ. ಜೋರತ್ ಮೂಲಕ ವಾಂಗಚುಕ್ ಅವರು ಭಾನುವಾರ ದೆಹಲಿಗೆ ಪ್ರಯಾಣಿಸಲಿದ್ದಾರೆ.

‘ಭೂತಾನ್ ದೊರೆಯ ಈ ಭೇಟಿ ಮೂಲಕ ಎರಡೂ ರಾಷ್ಟ್ರಗಳ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ’ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭೂತಾನ್ ದೊರೆಯ ಭೇಟಿಯ ಸಂದರ್ಭದಲ್ಲೇ ಅಲ್ಲಿನ ಮೂವರು ವಿದ್ಯಾರ್ಥಿಗಳಿಗೆ ರಾಜ್ಯದ ಎರಡು ವೈದ್ಯಕೀಯ ಕಾಲೇಜಿನಲ್ಲಿ ರಾಜ್ಯ ಸರ್ಕಾರ ಪ್ರವೇಶ ನೀಡಿದೆ.

ಭಾರತದೊಂದಿಗೆ ಭೂತಾನ್‌ 649 ಕಿ.ಮೀ. ಉದ್ದದ ಗಡಿ ಹೊಂದಿದೆ. ಇದರಲ್ಲಿ 267 ಕಿ.ಮೀ. ಅಸ್ಸಾಂ ಪ್ರದೇಶದಲ್ಲೇ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.