ADVERTISEMENT

ರಾಜಕೀಯ ವೈಷಮ್ಯ ಶಮನ ಮಾಡುವ ಸಮಯವಿದು: ಜೋ ಬೈಡನ್

ಪಿಟಿಐ
Published 15 ಜುಲೈ 2024, 14:10 IST
Last Updated 15 ಜುಲೈ 2024, 14:10 IST
ಜೋ ಬೈಡನ್‌
ಜೋ ಬೈಡನ್‌   

ಮಿಲ್ವಾಕಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೇಲೆ ಗುಂಡಿನ ದಾಳಿ ನಡೆದಿರುವ ಈ ಸಂದರ್ಭದಲ್ಲಿ ದೇಶದ ಎಲ್ಲ ಪ್ರಜೆಗಳು ಒಗ್ಗಟ್ಟಿನಿಂದ ಇರಬೇಕು ಮತ್ತು ಇದು ರಾಜಕೀಯ ವೈಷಮ್ಯವನ್ನು ಶಾಂತಗೊಳಿಸುವ ಸಮಯ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ತಿಳಿಸಿದ್ದಾರೆ.

‘ದೇಶದ ರಾಜಕಾರಣದಲ್ಲಿ ಉಂಟಾಗಿರುವ ತಾಪವನ್ನು ತಗ್ಗಿಸುವುದು ಇಂದಿನ ತುರ್ತು. ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ, ನಾವು ಶತ್ರುಗಳಲ್ಲ. ನಾವು ಸ್ನೇಹಿತರು, ನೆರೆಹೊರೆಯವರು, ಸಹೋದ್ಯೋಗಿಗಳು ಮತ್ತು ಅದಕ್ಕಿಂತಲೂ ಮುಖ್ಯವಾಗಿ ಅಮೆರಿಕದ ಪ್ರಜೆಗಳು’ ಎಂದ ಅವರು, ‘ಈ ಹೊತ್ತಿನಲ್ಲಿ ನಾವೆಲ್ಲ ಒಗ್ಗಟ್ಟಾಗಿರಬೇಕು‘ ಎಂದರು. 

‘ಡೊನಾಲ್ಡ್‌ ಟ್ರಂಪ್‌ ಅವರ ಮೇಲಿನ ದಾಳಿಯು ನಮ್ಮನ್ನು ಒಂದು ಹೆಜ್ಜೆ ಹಿಂದಕ್ಕೆ ಹೋಗುವಂತೆ ಮಾಡಿದೆ. ನಾವೀಗ ಯಾವ ಪರಿಸ್ಥಿತಿಯಲ್ಲಿದ್ದೇವೆ ಮತ್ತು ಅದನ್ನು ದಾಟಿ ಮುಂದೆ ಹೋಗುವುದು ಹೇಗೆ ಎಂಬ ಬಗ್ಗೆ ಯೋಚಿಸುವಂತೆ ಮಾಡಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.