ADVERTISEMENT

ಬಿಹಾರದ 165 ಕ್ಷೇತ್ರಗಳ ಮತದಾನ ಪೂರ್ಣ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 18:28 IST
Last Updated 3 ನವೆಂಬರ್ 2020, 18:28 IST
ಬಿಹಾರದಲ್ಲಿ ಮತಚಲಾವಣೆಗೆ ಸಾಲುಗಟ್ಟಿ ನಿಂತಿರುವ ಮಹಿಳೆಯರು
ಬಿಹಾರದಲ್ಲಿ ಮತಚಲಾವಣೆಗೆ ಸಾಲುಗಟ್ಟಿ ನಿಂತಿರುವ ಮಹಿಳೆಯರು    

ಪಟ್ನಾ: ಬಿಹಾರ ವಿಧಾನಸಭೆಯ 94 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.
ಶೇ 54ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ. ಮೊದಲ ಎರಡು ಹಂತಗಳಲ್ಲಿ ಅತಿ ಹೆಚ್ಚುಕ್ಷೇತ್ರಗಳನ್ನು ಗೆಲ್ಲುವ ಮೈತ್ರಿ
ಕೂಟವೇ ಅಧಿಕಾರಕ್ಕೆ ಏರುವ ಸಾಧ್ಯತೆ ಹೆಚ್ಚು. ಹಾಗಾಗಿ, ಎರಡನೇ ಹಂತದ ಮತದಾನ ಮಹತ್ವ ಪಡೆದಿತ್ತು.

243 ಕ್ಷೇತ್ರಗಳ ಪೈಕಿ 165ಕ್ಷೇತ್ರಗಳ ಮತದಾನ ಮೊದಲ ಎರಡು ಹಂತಗಳಲ್ಲಿ ಪೂರ್ಣಗೊಂಡಿದೆ. ಉಳಿದ ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ಇದೇ 7ರಂದು ಮತದಾನ ನಡೆಯಲಿದೆ.

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು ಸ್ಪರ್ಧಿಸಿರುವ ರಾಘೋಪುರ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ವಿಧಾನಸಭೆಗೆ ಸ್ಪರ್ಧಿಸಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.