ADVERTISEMENT

ಬಿಹಾರ: 24 ಗಂಟೆಯೊಳಗೆ ಮತ್ತೊಬ್ಬ ಮಹಿಳೆಯ ಸುಟ್ಟ ದೇಹ ಪತ್ತೆ

ಪಿಟಿಐ
Published 4 ಡಿಸೆಂಬರ್ 2019, 15:35 IST
Last Updated 4 ಡಿಸೆಂಬರ್ 2019, 15:35 IST

ಸಮಷ್ಟಿಪುರ್ (ಬಿಹಾರ): ಬಿಹಾರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಸುಟ್ಟಿದ್ದ ಪ್ರಕರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಮತ್ತೊಬ್ಬ ಮಹಿಳೆಯ ಸುಟ್ಟದೇಹ ಬುಧವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮಷ್ಟಿಪುರ್‌ ಜಿಲ್ಲೆಯ ದರ್‌ದರಿ ಚೌರ್ ಪ್ರದೇಶದಲ್ಲಿ ಮಹಿಳೆಯ ಸುಟ್ಟ ದೇಹ ಪತ್ತೆಯಾಗಿದ್ದು, ಮಹಿಳೆಯನ್ನು ಬೆಂಕಿ ಹಚ್ಚಿ ಸುಟ್ಟು ನಂತರ ಶವವನ್ನು ಮತ್ತೊಂದು ಕಡೆ ಎಸೆಯಲಾಗಿದೆ. ಮಹಿಳೆಯ ಶವ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT