ADVERTISEMENT

ಬಿಹಾರ ಚುನಾವಣೆ: ವರ್ಚುವಲ್‌ ಪ್ರಚಾರ!

ಪಿಟಿಐ
Published 19 ಆಗಸ್ಟ್ 2020, 21:28 IST
Last Updated 19 ಆಗಸ್ಟ್ 2020, 21:28 IST
   

ನವದೆಹಲಿ: ಈ ವರ್ಷದ ಅಂತ್ಯದಲ್ಲಿ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯ ವೇಳೆ ವರ್ಚುವಲ್‌ ಜೊತೆಗೆ ಬಹಿರಂಗ ಪ್ರಚಾರಕ್ಕೂ ಅವಕಾಶ ಸಿಗುವ ಸಾಧ್ಯತೆ ಇದೆ.

ಚುನಾವಣಾ ಆಯೋಗವು ಕೋವಿಡ್‌ ಕಾಲದಲ್ಲಿ ಹೊಸ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಚಿಂತಿಸಿದೆ ಎಂದು ಆಯೋಗದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿಬಹಿರಂಗ ಪ್ರಚಾರ ಆಯೋಜಿಸಲು ರಾಜಕೀಯ ಪಕ್ಷಗಳಿಗೆ ಕೆಲ ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ.

ADVERTISEMENT

ನಾಮಪತ್ರ ಸಲ್ಲಿಕೆಯ ವೇಳೆ ಅಭ್ಯರ್ಥಿಯ ಜೊತೆಗೆ ಇಬ್ಬರಿಗೆ ಮಾತ್ರ ಅವಕಾಶ ನೀಡುವ ಬಗ್ಗೆಯೂ ಚುನಾವಣಾ ಆಯೋಗ ಚರ್ಚೆ ನಡೆಸುತ್ತಿದೆ. ಆನ್‌ಲೈನ್‌ ಮೂಲಕ ನಾಮಪತ್ರ ಸಲ್ಲಿಸುವ ವ್ಯವಸ್ಥೆಗೂ ಚಾಲನೆ ನೀಡುವ ಸಾಧ್ಯತೆ ಇದೆ. ಮನೆ ಮನೆ ಪ್ರಚಾರದ ವೇಳೆ ಮೂರಕ್ಕಿಂತ ಹೆಚ್ಚು ಮಂದಿಗೆ ಅವಕಾಶ ನೀಡದಿರುವ ಬಗ್ಗೆಯೂ ಚಿಂತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.