ನವದೆಹಲಿ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿದ್ದು, ಇದರ ಭಾಗವಾಗಿ ಕಾಂಗ್ರೆಸ್, ಚುನಾವಣಾ ಸಮಿತಿಯನ್ನು ರಚಿಸಿದೆ.
ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ರಾಮ್, ಶಕೀಲ್ ಅಹ್ಮದ್ ಖಾನ್ ಮತ್ತು ಮದನ್ ಮೋಹನ್ ಝಾ ಸಮಿತಿಯಲ್ಲಿರುವ ಪ್ರಮುಖರು.
39 ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ. ಹೆಚ್ಚುವರಿಯಾಗಿ ಎಲ್ಲಾ ಸಂಸದರು, ಶಾಸಕರು, ಎಂಎಲ್‌ಸಿಗಳು, ಎಐಸಿಸಿ ಕಾರ್ಯದರ್ಶಿಗಳು, ಬಿಹಾರದ ಸಿಡಬ್ಲ್ಯೂಸಿ ಸದಸ್ಯರನ್ನು ಸಮಿತಿಗೆ ಸೇರಿಸಲಾಗಿದೆ.
ಸಮಿತಿ ರಚನೆಯ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ.
ಚುನಾವಣಾ ಸಮಿತಿಯಲ್ಲಿ ರಾಜೇಶ್ ರಾಥೋಡ್, ಮೋತಿಲಾಲ್ ಶರ್ಮಾ, ಅಂಶುಲ್ ಅವಿಜಿತ್, ಖೈಸರ್ ಅಲಿ ಖಾನ್, ರಮೇಶ್ ಪ್ರಸಾದ್ ಯಾದವ್, ಶಶಿ ರಂಜನ್, ಸುಬೋಧ್ ಮಂಡಲ್, ಫೌಜಿಯಾ ರಾಣಾ ಮತ್ತು ಖುಷ್ಬೂ ಕುಮಾರಿ ಸೇರಿದಂತೆ ಇತರರು ಇದ್ದಾರೆ.
ಇದೇ ನವೆಂಬರ್‌ನಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.