ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ಸಭೆ ಕರೆಯಲು ಕೋರಿದ್ದ ಕಾಂಗ್ರೆಸ್‌ನ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷಗಳು ತಮ್ಮ ಹಾಜರಾತಿಯನ್ನು ಖಚಿತಪಡಿಸದ ಕಾರಣ ಚುನಾವಣಾ ಆಯೋಗವು ಸಭೆಯನ್ನು ರದ್ದುಪಡಿಸಿದೆ.
ಕಾಂಗ್ರೆಸ್‌ನ ಕಾನೂನು ಕೋಶವು ಚುನಾವಣಾ ಆಯೋಗಕ್ಕೆ ಇ–ಮೇಲ್ ಕಳುಹಿಸಿ, ಜುಲೈ 2ರಂದು ವಿರೋಧ ಪಕ್ಷಗಳ ತುರ್ತು ಸಭೆ ಕರೆಯಲು ಕೋರಿತ್ತು. ಇದರಲ್ಲಿ ವಿವಿಧ ರಾಜಕೀಯ ಪಕ್ಷಗಳ ಪರವಾನಗಿ ನವೀಕರಣ ವಿಷಯವೂ ಒಳಗೊಂಡಿತ್ತು.
ಇ–ಮೇಲ್ ಮೂಲಕ ಕಳುಹಿಸಿರುವ ಪತ್ರದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳ ಹೆಸರುಗಳನ್ನೂ ಕಾಂಗ್ರೆಸ್ ಉಲ್ಲೇಖಿಸಿತ್ತು ಎಂದು ಮೂಲಗಳು ಹೇಳಿವೆ.
ಸಭೆಯಲ್ಲಿ ಹಾಜರಾತಿ ಖಾತ್ರಿಪಡಿಸುವಂತೆ ಎಲ್ಲಾ ಪಕ್ಷಗಳನ್ನು ಚುನಾವಣಾ ಆಯೋಗ ಸೂಚಿಸಿತ್ತು. ಆದರೆ ಯಾವೊಂದು ಪಕ್ಷವೂ ತಮ್ಮ ಪ್ರತಿನಿಧಿಗಳ ಹಾಜರಾತಿಯನ್ನು ಖಾತ್ರಿಪಡಿಸದ ಕಾರಣ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.