ADVERTISEMENT

ಬಿಹಾರ | ಸೀಟು ಹಂಚಿಕೆ: ಹೆಚ್ಚು ಸ್ಥಾನಗಳಿಗೆ ಎಡಪಕ್ಷಗಳು ಅರ್ಹ: ಎಂ.ಎ. ಬೇಬಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 23:25 IST
Last Updated 21 ಸೆಪ್ಟೆಂಬರ್ 2025, 23:25 IST
<div class="paragraphs"><p>– ‍ಪ್ರಜಾವಾಣಿ ಚಿತ್ರ</p></div>
   

– ‍ಪ್ರಜಾವಾಣಿ ಚಿತ್ರ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ‌ಎಡಪಕ್ಷಗಳಿಗೆ ಸೀಟು ಹಂಚಿಕೆ ವೇಳೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕು. ಇದಕ್ಕೆ ಎಡಪಕ್ಷಗಳು ಅರ್ಹರು. ಆದರೆ, ನಮ್ಮ ಬೇಡಿಕೆಯನ್ನು ನಾವು ವಾಸ್ತವ ನೆಲೆಯಲ್ಲಿ ಮತ್ತು ನ್ಯಾಯಯುತವಾಗಿ ಮುಂದಿಡುತ್ತೇವೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದರು.

ಪಿಟಿಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಅವರು ಮಾತನಾಡಿದರು. ‘ಈ ಬಾರಿ ಚುನಾವಣೆಯಲ್ಲಿ ಮಹಾ ಮೈತ್ರಿಕೂಟವೇ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ‘ಮತದಾರರ ಅಧಿಕಾರ ಯಾತ್ರೆ’ ಬಳಿಕ ರಾಜ್ಯದಲ್ಲಿ ನಮ್ಮ ಪರವಾಗಿ ಅಲೆ ಎದ್ದಿದೆ. ವಿಶೇಷವಾಗಿ ಯುವಕರು, ಮಹಿಳೆಯರು ನಮ್ಮ ಪರ ಇದ್ದಾರೆ’ ಎಂದರು.

ADVERTISEMENT

‘ಸೀಟು ಹಂಚಿಕೆ ಕುರಿತು ನಾವು ತೇಜಸ್ವಿ ಅವರೊಂದಿಗೆ ಮಾತನಾಡಿದ್ದೇವೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪ್ರದರ್ಶನವು ಅತ್ಯುತ್ತಮವಾಗಿತ್ತು. ಇದನ್ನು ನಾವು ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ಪಕ್ಷದ ಕುರಿತೂ ಜನರಲ್ಲಿ ಒಲವಿದೆ. ಕಳೆದ ಬಾರಿ ನಾವು 4 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. ಇದರಲ್ಲಿ ಎರಡರಲ್ಲಿ ಗೆಲುವು ಸಾಧಿಸಿದ್ದೆವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.