ADVERTISEMENT

ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಇನ್ನೂ ಪತ್ತೆಯಾಗದ 1 ಲಕ್ಷ ಮತದಾರರು

ಪಿಟಿಐ
Published 23 ಜುಲೈ 2025, 14:16 IST
Last Updated 23 ಜುಲೈ 2025, 14:16 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ 1 ಲಕ್ಷ ಮತದಾರರನ್ನು ಇನ್ನೂ ಪತ್ತೆ ಮಾಡಲಾಗುತ್ತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.

ಬಿಹಾರದಲ್ಲಿ 7.17 ಕೋಟಿ ಮತದಾರರ ಗಣತಿ ನಮೂನೆಗಳನ್ನು ಸ್ವೀಕರಿಸಿ ಡಿಜಿಟಲೀಕರಣಗೊಳಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ADVERTISEMENT

20 ಲಕ್ಷ ಮತದಾರರು ಮೃತಪಟ್ಟಿದ್ದಾರೆ, 28 ಲಕ್ಷ ಮತದಾರರು ಪತ್ತೆಯಾಗಿದ್ದು, ಅವರು ತಮ್ಮ ಖಾಯಂ ನಿವಾಸದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 15 ಲಕ್ಷ ಮತದಾರರು ಗಣತಿ ನಮೂನೆಗಳನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳಿಗೆ ಹಿಂದಿರುಗಿಸಿಲ್ಲ ಎಂಬುದನ್ನು ಆಯೋಗ ಗಮನಿಸಿದೆ ಎಂದು ಹೇಳಿದೆ.

ಆಗಸ್ಟ್‌1 ರಂದು ಮೊದಲ ಹಂತದ ಪರಿಷ್ಕೃತ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು. ಇದರಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ಮತದಾರ ಅಥವಾ ರಾಜಕೀಯ ಪಕ್ಷ ಸೆ.1ರೊಳಗೆ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗೆ ದೂರನ್ನು ಸಲ್ಲಿಸಬಹುದು.‌ ಅದೇ ರೀತಿ ಮತದಾನಕ್ಕೆ ಅರ್ಹವಾಗಿರುವ ಯಾವೊಬ್ಬ ವ್ಯಕ್ತಿ ತನ್ನ ಹೆಸರು ಕರಡು ಪಟ್ಟಿಯಲ್ಲಿ ಇಲ್ಲದಿದ್ದರೆ ಅವರೂ ಕೂಡ ಸೆ.1ರೊಳಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಆಯೋಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.