ADVERTISEMENT

ಸುಶಾಂತ್‌ ಮಾಜಿ ವ್ಯವಸ್ಥಾಪಕಿ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಂದ ತನಿಖೆ

ಪಿಟಿಐ
Published 2 ಆಗಸ್ಟ್ 2020, 11:17 IST
Last Updated 2 ಆಗಸ್ಟ್ 2020, 11:17 IST
ಸುಶಾಂತ್‌ ಸಿಂಗ್‌ ರಜಪೂತ್‌
ಸುಶಾಂತ್‌ ಸಿಂಗ್‌ ರಜಪೂತ್‌   

ಮುಂಬೈ: ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯಾನ್‌ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಬಿಹಾರ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಸುಶಾಂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರ ತಂಡ ಸದ್ಯ ಮುಂಬೈನಲ್ಲಿದೆ. ಇದೇ ತಂಡ ದಿಶಾ ಸಾಲಿಯಾನ್‌ ಆತ್ಮಹತ್ಯೆ ಬಗ್ಗೆಯೂ ತನಿಖೆ ಕೈಗೊಳ್ಳಲಿದೆ.

ಜೂನ್‌ 8ರಂದು ಮಲಾಡ್‌ ಪ್ರದೇಶದ ಎತ್ತರದ ಕಟ್ಟಡದಿಂದ ಜಿಗಿದು ದಿಶಾ ಸಾಲಿಯಾನ್‌ (28) ಆತ್ಮಹತ್ಯೆ ಮಾಡಿಕೊಂಡಿದ್ದರು. ನಟರಾದ ಭಾರತಿ ಸಿಂಗ್‌, ರಿಯಾ ಚಕ್ರವರ್ತಿ ಮತ್ತು ವರುಣ್‌ ಶರ್ಮಾ ಅವರ ಜತೆಗೂ ದಿಶಾ ಕಾರ್ಯನಿರ್ವಹಿಸಿದ್ದರು.

ADVERTISEMENT

ಸುಶಾಂತ್‌ ಅವರ ಸ್ನೇಹಿತ ಸಿದ್ಧಾರ್ಥ ಪಿಠಾಣಿ ಅವರನ್ನು ಸಹ ಬಿಹಾರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಕಳೆದ ಒಂದು ವರ್ಷದಿಂದ ಸುಶಾಂತ್‌ ಜತೆ ಸಿದ್ಧಾರ್ಥ ವಾಸಿಸುತ್ತಿದ್ದರು ಎಂದು ಪಟ್ನಾ ವಲಯದ ಐಜಿಪಿ ಸಂಜಯ್‌ ಸಿಂಗ್‌ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಸ್ಥಳಗಳಿಗೂ ಪೊಲೀಸ್‌ ಅಧಿಕಾರಿಗಳಿಗೆ ತೆರಳಿ ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವರ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಿಹಾರ ಪೊಲೀಸರು ಇದುವರೆಗೆ 10 ಮಂದಿಯ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.