ADVERTISEMENT

ನೇಮಕಾತಿ ಪರೀಕ್ಷೆಗೆ ಏಕರೂಪದ ಶುಲ್ಕ; ಬಿಹಾರ ಸಚಿವ ಸಂಪುಟ ಒಪ್ಪಿಗೆ

ಪಿಟಿಐ
Published 19 ಆಗಸ್ಟ್ 2025, 13:44 IST
Last Updated 19 ಆಗಸ್ಟ್ 2025, 13:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಟ್ನಾ: ರಾಜ್ಯದ ಎಲ್ಲ ನೇಮಕಾತಿಗಳ ಪೂರ್ವಭಾವಿ ಪರೀಕ್ಷೆಗಳಿಗೆ ಏಕರೂಪದ ₹100 ಶುಲ್ಕ ವಿಧಿಸುವ ಪ್ರಸ್ತಾವಕ್ಕೆ ಬಿಹಾರ ಸಚಿವ ಸಂಪುಟ ಮಂಗಳವಾರ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಾರ್ವಜನಿಕ ಆಡಳಿತ ಇಲಾಖೆ (ಜಿಎಡಿ) ಪ್ರಸ್ತಾವಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್‌ ನೇತೃತ್ವದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು. ಇದೇ ಸಂದರ್ಭದಲ್ಲಿ, ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಖ್ಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸದಿರಲೂ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ADVERTISEMENT

ಬಿಹಾರ ಸಾರ್ವಜನಿಕ ಸೇವೆ ಆಯೋಗ, ಬಿಹಾರ ಸಿಬ್ಬಂದಿ ನೇಮಕಾತಿ ಆಯೋಗ, ಬಿಹಾರ ತಾಂತ್ರಿಕ ಸೇವೆ ಆಯೋಗ, ಬಿಹಾರ ಪೊಲೀಸ್ ಅಧೀನ ಸೇವೆ ಆಯೋಗ ಮತ್ತು ಸೆಂಟ್ರಲ್‌ ಕಾನ್‌ಸ್ಟೆಬಲ್‌ ನೇಮಕಾತಿ ಮಂಡಳಿಗಳು ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.