ಪೂರ್ಣಿಯಾ: ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರನ್ನು ಪೊದೆಯೊಂದರಲ್ಲಿ ಹಾಕಿ ಸಜೀವ ದಹನ ಮಾಡಲಾಗಿದ್ದು, ಪೊಲೀಸರು ಮಾಟಮಂತ್ರದ ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗೆ ಶೋಧ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟೆಟ್ಮಾ ಗ್ರಾಮದಲ್ಲಿ ಭಾನುವಾರ ರಾತ್ರಿ ಮಾಟ–ಮಂತ್ರದ ಆಚರಣೆಗಾಗಿ ಐವರನ್ನೂ ಕೊಲೆ ಮಾಡಿ ಆನಂತರ ಪೊದೆಯೊಂದರಲ್ಲಿ ಹಾಕಿ ಸುಟ್ಟಿರಬಹುದು ಎಂದು ಡಿಐಜಿ ಪ್ರಮೋದ್ ಕುಮಾರ್ ಮಂಡಲ್ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಬಾಲಕ ಸೋನುಕುಮಾರ್ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೊಲೆ ಮಾಡಿದ್ದಾರೆ ಎನ್ನಲಾದವರೂ ಅದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ. ವಿಧಿವಿಜ್ಞಾನ ತಜ್ಞರ ತಂಡ ಸ್ಥಳ ಪರಿಶೀಲನೆ ಮಾಡಿದೆ.
ಘಟನೆಗೆ ಆರ್‌ಜೆಡಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಆಘಾತ ವ್ಯಕ್ತಪಡಿಸಿ, ಇದು ಕಾನೂನು ಸುವ್ಯವಸ್ಥೆ ಕುಸಿತಕ್ಕೆ ಸಾಕ್ಷಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.