ADVERTISEMENT

ಮಿಲ್ಕಾ ಸಿಂಗ್ ಸೇರಿ 4 ಕ್ರೀಡಾಪಟುಗಳ ಜೀವನಚರಿತ್ರೆ ಪಂಜಾಬ್‌ ಪಠ್ಯದಲ್ಲಿ ಸೇರ್ಪಡೆ

ಪಿಟಿಐ
Published 16 ಏಪ್ರಿಲ್ 2023, 15:33 IST
Last Updated 16 ಏಪ್ರಿಲ್ 2023, 15:33 IST
ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್
ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್   

ಪಂಜಾಬ್‌ : ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಬೆಳೆಸುವ ಸಲುವಾಗಿ ಲೆಜೆಂಡರಿ ಅಥ್ಲೀಟ್ ಮಿಲ್ಕಾ ಸಿಂಗ್ ಮತ್ತು ಹಾಕಿ ಐಕಾನ್ ಬಲ್ಬೀರ್ ಸಿಂಗ್ ಸೀನಿಯರ್ ಸೇರಿದಂತೆ ನಾಲ್ವರು ಶ್ರೇಷ್ಠ ಆಟಗಾರರ ಜೀವನ ಕಥೆಗಳನ್ನು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಕ್ರಮವಾಗಿ ಕಲಿಸಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ.

ಬಲ್ಬೀರ್ ಸಿಂಗ್ ಸೀನಿಯರ್ ಮತ್ತು ಮಿಲ್ಕಾ ಸಿಂಗ್ ಜೊತೆಗೆ ಏಷ್ಯನ್ ಚಾಂಪಿಯನ್ ಬಾಕ್ಸರ್ ಕೌರ್ ಸಿಂಗ್ ಮತ್ತು ದೇಶದ ಮೊದಲ ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಿಂಪಿಯನ್ ಅಥ್ಲೀಟ್ ಗುರ್ಬಚನ್ ಸಿಂಗ್ ರಾಂಧವಾ ಅವರ ಜೀವನ ಕಥೆಗಳನ್ನು ಪಠ್ಯದಲ್ಲಿ ಸೇರಿಸಲು ನಿರ್ಧಾರಿಸಲಾಗಿದೆ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಹೇಳಿದ್ದಾರೆ.

‘ರಾಜ್ಯ ಅತ್ಯುನ್ನತ ಕ್ರೀಡಾ ಸಂಸ್ಕೃತಿಯನ್ನು ಹೆಚ್ಚಿಸಲು ಮತ್ತು ಪಂಜಾಬ್ ಅನ್ನು ಕ್ರೀಡಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ತರಲು ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಶಾಲಾ ಶಿಕ್ಷಣ ಇಲಾಖೆಯು ಪಂಜಾಬ್‌ನ ಮಣ್ಣಿನ ಮಕ್ಕಳ ಜೀವನ ಚರಿತ್ರೆಯನ್ನು ಪಠ್ಯಕ್ರಮದ ಭಾಗವಾಗಿ ಮಾಡಿದೆ. ಇವರುಗಳ ಸಂಕ್ಷಿಪ್ತ ಜೀವನಚರಿತ್ರೆಯನ್ನು ಈ ಬಾರಿಯ ದೈಹಿಕ ಶಿಕ್ಷಣದ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ‘ ಎಂದು ಬೈನ್ಸ್‌ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.