ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅದರ ಸಂಸ್ಥಾಪಕ ಡಾ. ಕೇಶವ್ ಬಲಿರಾಮ್ ಹೆಡಗೇವಾರ್ ಅವರ ಜೀವನ ಚರಿತ್ರೆಯ ಪುಸ್ತಕವೂ ಬಿಡುಗಡೆಗೆಯಾಗಲಿದೆ.
ಹೆಡಗೇವಾರ್ ಅವರ ಬಗ್ಗೆ 7 ವರ್ಷ ಸಂಶೋಧನೆ ನಡೆಸಿ, ಸಚಿನ್ ನಂದಾ ಅವರು ‘ಹೆಡಗೇವಾರ್: ಎ ಡೆಫಿನೈಟಿವ್ ಬಯೋಗ್ರಫಿ’ ಪುಸ್ತಕವನ್ನು ಬರೆದಿದ್ದಾರೆ. ಹೆಡಗೇವಾರ್ ಅವರು 1925ರಲ್ಲಿ ಆರ್‌ಎಸ್‌ಎಸ್ ಅನ್ನು ಸ್ಥಾಪಿಸಿದರು.
ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂದಾ ಅವರು, ‘ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಸಾವರ್ಕರ್ ಅವರಂತಹ ಸಮಕಾಲೀನರೊಂದಿಗೆ ಹೆಡಗೇವಾರ್ ಅವರ ಜೀವನ ಹಾಗೂ ಸವಾಲುಗಳನ್ನು ಪರಿಶೀಲಿಸಲು ನಾನು ಪ್ರಯತ್ನಿಸಿದ್ದೇನೆ. ಈ ಪುಸ್ತಕವು ಹೆಡಗೇವಾರ್ ಅವರ ಜೀವನ ಚರಿತ್ರೆ ಮಾತ್ರವೇ ಆಗಿರದೆ ಆರ್‌ಎಸ್‌ಎಸ್‌ನ ಮೂಲ ಮತ್ತು ದೇಶದ ಮೇಲೆ ಅದರ ಪ್ರಭಾವದ ಕುರಿತು ಸೂಕ್ಷ್ಮ ದೃಷ್ಟಿಕೋನವನ್ನು ನೀಡುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.