ನವದೆಹಲಿ: ಪೂರ್ವ ದೆಹಲಿಯ ಸಂಜಯ್ ಸರೋವರ ಬಳಿ ಶನಿವಾರ 10 ಬಾತುಕೋಳಿಗಳ ಮೃತದೇಹ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವ ತನಕ ಸರೋವರವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಯೂರ್ ವಿಹಾರ ಮೂರನೇ ಹಂತದ ಸೆಂಟ್ರಲ್ ಪಾರ್ಕ್ ಬಳಿ 17 ಕಾಗೆಗಳ ಮೃತದೇಹ ಪತ್ತೆಯಾಗಿತ್ತು. ಇದರ ಬೆನ್ನಲೇ ಬಾತುಕೋಳಿಗಳೂ ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನಮಗೆ ಸರೋವರದಲ್ಲಿ 10 ಬಾತುಕೋಳಿಗಳ ಮೃತದೇಹ ಸಿಕ್ಕಿವೆ. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ವೈದ್ಯ ಡಾ.ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.
‘ಪಶ್ಚಿಮ ದೆಹಲಿಯ ದ್ವಾರಕಾ, ಮಯೂರ ವಿಹಾರ ಮೂರನೇ ಹಂತ, ಹಸ್ತಾಲಾ ಗ್ರಾಮದಲ್ಲಿ ಹಲವು ಕಾಗೆಗಳು ಸತ್ತಿವೆ ಎಂಬ ಮಾಹಿತಿ ಸಿಕ್ಕಿವೆ. ಆದರೆ ಪಕ್ಷಿಗಳ ಈ ರೀತಿ ಸಾವಿಗೆ ಹಕ್ಕಿ ಜ್ವರ ಕಾರಣವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸೋಮವಾರ ವರದಿ ಲಭ್ಯವಾಗಲಿದೆ’ ಎಂದು ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.
ದೆಹಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 35 ಕಾಗೆಗಳು ಸೇರಿದಂತೆ 50 ಪಕ್ಷಿಗಳು ಮೃತಪಟ್ಟಿವೆ. ಇದು ನಗರದ ಜನರಲ್ಲಿ ‘ಹಕ್ಕಿ ಜ್ವರ’ದ ಭೀತಿ ಸೃಷ್ಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.