ADVERTISEMENT

2024ರ ಚುನಾವಣೆಯಲ್ಲಿ ತೃತೀಯ ರಂಗದ ಜೊತೆಗೆ ಮೈತ್ರಿ ಇಲ್ಲ: ಬಿಜೆಡಿ

ಪಿಟಿಐ
Published 12 ಮೇ 2023, 14:18 IST
Last Updated 12 ಮೇ 2023, 14:18 IST
.
.   

ಭುವನೇಶ್ವರ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಆಡಳಿತಾರೂಢ ಬಿಜು ಜನತಾದಳವು (ಬಿಜೆಡಿ) ಕಾಂಗ್ರೆಸ್‌, ಬಿಜೆಪಿ ಜೊತೆ ಅಷ್ಟೇ ಅಲ್ಲದೆ ತೃತೀಯ‌ ರಂಗದ  ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬುದನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅವರು ಸ್ಪಷ್ಟಪಡಿಸಿದ್ದಾರೆ’ ಎಂದೂ ಹೇಳಿದ್ದಾರೆ.

‘ರಾಜ್ಯದ ಹಿತಾಸಕ್ತಿಯು ಪಕ್ಷಕ್ಕೆ ಮುಖ್ಯ. ಒಡಿಶಾದ ಅಭಿವೃದ್ಧಿಯು ನಮ್ಮ ಧ್ಯೇಯ’ ಎಂದಿದ್ದಾರೆ.

ADVERTISEMENT

‘ಪಟ್ನಾಯಕ್‌ ಅವರ ಆತ್ಮೀಯ ಮಿತ್ರರಾದ ನಿತೀಶ್‌ ಕುಮಾರ್‌ ಅವರ ಪ್ರಸ್ತಾವಿತ ತೃತೀಯ ರಂಗದಿಂದಲೂ ಪಕ್ಷವು ಅಂತರ ಕಾಯ್ದುಕೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಜ್ಯದ 4.5 ಕೋಟಿ ಜನರ ಬೆಂಬಲವಿರುವಾಗ ಚುನಾವಣೆಯಲ್ಲಿ ಗೆಲ್ಲಲು ಪಕ್ಷವು ಇತರರ ಬೆಂಬಲ ಯಾಚಿಸುವುದಿಲ್ಲ’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.