ಕಾಂಗ್ರೆಸ್ ಬಿಜೆಪಿ
ಜಮ್ಶೆಡ್‌ಪುರ(ಜಾರ್ಖಂಡ್): ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಅಜೋಯ್ ಕುಮಾರ್, ‘ಮನುಸ್ಮೃತಿ ತತ್ವಗಳಿಗೆ ಬದ್ಧವಾಗಿರುವ ಬಿಜೆಪಿ ದಲಿತರನ್ನು ಅವಮಾನಿಸುತ್ತಲೇ ಬಂದಿದೆ’ ಎಂದು ಹೇಳಿದರು.
‘ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಹೇಳಿಕೆಯಿಂದ ಮನುಸ್ಮೃತಿ ಪಾಲಿಸುವ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ’ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ದಲಿತ ವಿರೋಧಿ ಧೋರಣೆ ಹೊಂದಿರುವ ಬಿಜೆಪಿಯು ಜಾತಿ ಆಧಾರಿತ ಗಣತಿಯನ್ನು ವಿರೋಧಿಸುತ್ತಿದೆ’ ಎಂದೂ ಆರೋಪಿಸಿದ್ದಾರೆ.
‘ಬಿಜೆಪಿಯ ದಲಿತ ವಿರೋಧಿ ಧೋರಣೆ ಮುನ್ನೆಲೆಗೆ ಬಂದಿದ್ದು ಇದೇ ಮೊದಲಲ್ಲ... ಹಿಂದೆ ಹಲವು ನಿದರ್ಶನಗಳಿಗೆ. ಕಾಂಗ್ರೆಸ್ ಪಕ್ಷ ದಲಿತರನ್ನು ಗೌರವಿಸುತ್ತಾ ಬಂದಿದೆ’ ಎಂದಿದ್ದಾರೆ.
ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆಗೆ ದೇಶ ಮುಂದೆ ಕ್ಷಮೆಯಾಚಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.