ADVERTISEMENT

ನೆಹರೂ ಪತ್ರ ವ್ಯವಹಾರಗಳ ದಾಖಲೆ ಹಿಂದಿರುಗಿಸಿ: ಬಿಜೆಪಿ

ಪಿಟಿಐ
Published 16 ಡಿಸೆಂಬರ್ 2024, 14:30 IST
Last Updated 16 ಡಿಸೆಂಬರ್ 2024, 14:30 IST
ಸಂಬಿತ್‌ ಪಾತ್ರ
ಸಂಬಿತ್‌ ಪಾತ್ರ   

ನವದೆಹಲಿ: ‘ಐತಿಹಾಸಿಕ ದಾಖಲೆಗಳು ದೇಶದ ಸ್ವತ್ತೇ ಹೊರತು, ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ’ ಎಂದಿರುವ ಬಿಜೆಪಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪತ್ರ ವ್ಯವಹಾರಗಳನ್ನು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ (ಪಿಎಂಎಂಎಲ್‌) ಹಿಂದಿರುಗಿಸುವಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಒತ್ತಾಯಿಸಿದೆ.

ದೇಶದ ಕೊನೆಯ ವೈಸರಾಯ್‌ ಅವರ ಪತ್ನಿಯಾದ ಎಡ್ವಿನ್‌ ಮೌಂಟ್‌ಬ್ಯಾಟನ್‌, ಪ್ರಸಿದ್ಧ ನಾಯಕರಾದ ಜಯಪ್ರಕಾಶ ನಾರಾಯಣ್‌, ಜಗಜೀವನ್‌ ರಾಮ್‌ ಅವರಿಗೆ ಬರೆದ ಪತ್ರಗಳನ್ನು ಆಗಿನ ನೆಹರೂ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯು ಸೋನಿಯಾ ಗಾಂಧಿ ಅವರಿಗೆ 2008ರಲ್ಲಿ ಹಿಂದಿರುಗಿಸಿತ್ತು ಎಂದು ಬಿಜೆಪಿ ಸಂಸದ ಮತ್ತು ವಕ್ತಾರ ಸಂಬಿತ್‌ ಪಾತ್ರ ಅವರು ಪಿಎಂಎಂಎಲ್‌ ಚರ್ಚೆಯ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೆಹರೂ ವಸ್ತುಸಂಗ್ರಹಾಲಯವನ್ನು ವಿಸ್ತರಿಸಿ, ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಮರುನಾಮಕರಣ ಮಾಡಿತು.

ADVERTISEMENT

ವಸ್ತುಸಂಗ್ರಹಾಲಯದ ಆಗಿನ ನಿರ್ದೇಶಕರ ಅನುಮೋದನೆ ಬಳಿಕ ನೆಹರೂ ಅವರ ಪತ್ರವ್ಯವಹಾರಗಳ ದಾಖಲೆಗಳ 51 ಪೆಟ್ಟಿಗೆಗಳನ್ನು ಸೋನಿಯಾ ಗಾಂಧಿ ಅವರಿಗೆ ನೀಡಲಾಗಿದೆ ಎಂದು ಪಾತ್ರ ಸುದ್ದಿಗಾರರಿಗೆ ತಿಳಿಸಿದರು.

ನೆಹರೂ ಅವರ ಯಾವ ಪತ್ರಗಳ ವಿಷಯಗಳನ್ನು ಸಾರ್ವಜನಿಕಗೊಳಿಸಬಾರದು ಎಂದು ಅವರ ಕುಟುಂಬದವರು ಭಾವಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

2010ರಲ್ಲಿ ವಸ್ತುಸಂಗ್ರಹಾಲಯದಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಆರಂಭವಾಯಿತು. ಅದಕ್ಕೂ ಮುನ್ನವೇ ಗಾಂಧಿ ಕುಟುಂಬವು ನೆಹರೂ ಅವರ ಪತ್ರ ವ್ಯವಹಾರಗಳ ದಾಖಲೆಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿತ್ತು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.