ADVERTISEMENT

ಚುನಾವಣೆಗಾಗಿ ಬಿಜೆಪಿಯಿಂದ ಹಿಂದೂ–ಮುಸ್ಲಿಂ ವಿಭಜನೆ: ಮೆಹಬೂಬ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 14:06 IST
Last Updated 10 ಜನವರಿ 2022, 14:06 IST
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ   

ಶ್ರೀನಗರ: ‘ದೇಶದ ಆಡಳಿತಾರೂಢ ಬಿಜೆಪಿಯು ಚುನಾವಣೆಗಾಗಿ ಹಿಂದೂ–ಮುಸ್ಲಿಂ ವಿಭಜನೆ ಮಾಡುತ್ತಿದ್ದು, ದೇಶದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಕೊಡುಗೆ ಶೂನ್ಯ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಆರೋಪಿಸಿದರು.

ನಗರದ ಪಿಡಿಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ನಡುವೆ ಗಲಭೆ ಹಬ್ಬಿಸುವುದೇ ಬಿಜೆ‍ಪಿಯ ಕಾರ್ಯಾಸೂಚಿಯಾಗಿದೆ. ಈ ಎರಡೂ ಸಮುದಾಯಗಳ ಸಾಮರಸ್ಯವನ್ನು ಹಾಳು ಮಾಡಲು ಬಿಜೆಪಿ ಬಯಸಿದೆ. ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ರಾಷ್ಟ್ರೀದ ಪ್ರಾಚೀನ ಕೋಮು ಸೌಹಾರ್ದತೆಯ ಮೇಲೆ ದಾಳಿ ನಡೆಸುತ್ತಿದೆ’ ಎಂದು ದೂರಿದರು.

‘ಪಿಡಿಪಿಯು ಯಾವಾಗಲೂ ಸತ್ಯದ ಜತೆ ನಿಲ್ಲುವುದರಿಂದ ಹಾಗೂ ಅದು ನಡೆಸುವ ಹೋರಾಟಕ್ಕೆ ಸರ್ಕಾರವು ಹೆದರಿದಂತಿದೆ. ಪಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಅಗಲಿದ ನೆಚ್ಚಿನ ನಾಯಕನಿಗೆ ಶ್ರದ್ದಾಂಜಲಿ ಸಲ್ಲಿಸುವ ಸಂದರ್ಭದಲ್ಲಿ ಮಾತ್ರ ಕೋವಿಡ್‌ ನಿಯಮಾವಳಿಗಳು ನೆನಪಿಗೆ ಬರುತ್ತವೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.