ADVERTISEMENT

ಮಹಾರಾಷ್ಟ್ರ: ಮುಖ್ಯಮಂತ್ರಿ ಹುದ್ದೆಗೆ ದೇವೇಂದ್ರ ಫಡಣವೀಸ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 12:28 IST
Last Updated 8 ನವೆಂಬರ್ 2019, 12:28 IST
   

ಮಹಾರಾಷ್ಟ್ರ:ಬಿಜೆಪಿ ಹಾಗೂ ಶಿವಸೇನಾ ನಡುವೆಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿರುವ ಬೆನ್ನ ಹಿಂದೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಶುಕ್ರವಾರ ಸಂಜೆ ರಾಜಭವನಕ್ಕೆ ತೆರಳಿರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ರಾಜ್ಯಪಾಲರು ಉಸ್ತುವಾರಿ ಮುಖ್ಯಮಂತ್ರಿಯಾಗಿರುವಂತೆ ಹೇಳಿದ್ದಾರೆ ಎಂದಿದ್ದಾರೆ.

ರಾಜೀನಾಮೆ ನೀಡಿದ ನಂತರ ದೇವೇಂದ್ರ ಫಡಣವೀಸ್ ಹೇಳಿಕೆ

ADVERTISEMENT

* ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಅಂಗೀಕಾರವಾಗಿದೆ. ಕಳೆದ ಐದು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಲು ಅವಕಾಶ ನೀಡಿದ ಮಹಾರಾಷ್ಟ್ರ ಜನತೆ ನನ್ನ ಅಭಿನಂದನೆಗಳು.

* 2.5 ವರ್ಷಗಳ ಅಧಿಕಾರ ಹಂಚಿಕೆ ವಿಷಯ ನನ್ನ ಮುಂದೆ ಬಂದಿಲ್ಲ

* ಉದ್ಧವ್ ಜಿ ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಾವು ಅವರೊಂದಿಗಿನ ಮಾತುಕತೆ ನಿಲ್ಲಿಸಿಲ್ಲ. ಅವರೇ ನಮ್ಮ ಜೊತೆ ಮಾತನಾಡುತ್ತಿಲ್ಲ. ಅವರು ಬೇಸರಗೊಂಡಿರುವ ಸಾಧ್ಯತೆ ಇದೆ. ಅವರ ಜೊತೆ ಚರ್ಚಿಸಲು ಕೆಲ ಸಮಯಾವಕಾಶ ಬೇಕು. ಆದರೆ, ದುರಾದೃಷ್ಟಕರ ಸಂಗತಿ ಎಂದರೆ, ದಿನಕ್ಕೆ ಒಂದು ಅಥವಾ ಎರಡು ಸಲಶಿವಸೇನೆ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

* ಶಿವಸೇನೆ ಸುತ್ತಮುತ್ತ ಇರುವ ಜನರಿಂದ ಪರಿಸ್ಥಿತಿ ಅಧೋಗತಿಗೆ ತಲುಪಿದೆ.

* ವಿರೋಧಪಕ್ಷಗಳು ನಮ್ಮನ್ನು ಟೀಕಿಸಲಿ, ಆದರೆ, ಶಿವಸೇನೆ ನಮ್ಮ ಆಡಳಿತದ ಒಂದು ಭಾಗವಾಗಿದ್ದು ಟೀಕಿಸುವುದು ಸರಿಯಾದಕ್ರಮವಲ್ಲ.

* ನಮ್ಮ ನಾಯಕ ಮೋದಿ ವಿರುದ್ದ ಮಾತನಾಡಿದ್ದಕ್ಕೆ ನಮಗೆ ನೋವಾಗಿದೆ.

* ನೂತನ ಸರ್ಕಾರ ರಚನೆಯಾಗುವವರೆಗೆ ಅಥವಾ ಪರ್ಯಾಯ ಕ್ರಮಗಳು ಜಾರಿಗೆ ಬರುವವರೆಗೆ ನನ್ನನ್ನು
ಉಸ್ತುವಾರಿ ಮುಖ್ಯಮಂತ್ರಿಯಾಗಿ ಇರುವಂತೆ ರಾಜ್ಯಪಾಲರು ಹೇಳಿದ್ದಾರೆ.

* ಇದು ಮಹಾರಾಷ್ಟ್ರ ಜನತೆಗೆ ಅಗೌರವ ತೋರಿದಂತೆ. ನಾವು ಯಾವುದೇ ಕಾರಣಕ್ಕೂ ಇನ್ನೊಂದು ಚುನಾವಣೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದಿಲ್ಲ.

* ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ ಎಂಬ ಕೆಲ ಮುಖಂಡರು ಹೇಳಿರುವ ಹೇಳಿಕೆಗಳು ಶುದ್ಧ ಸುಳ್ಳು

* ಜನತೆ ನೀಡಿದ ತೀರ್ಮಾನದಂತೆ ನಾವು ಸರ್ಕಾರ ರಚಿಸಲು ಅವಕಾಶ ಇಲ್ಲವಲ್ಲ ಎಂಬ ನೋವಿದೆ

* ನಾವು ಅಧಿಕಾರಕ್ಕೆ ಬರಲು ರೆಸಾರ್ಟ್ ರಾಜಕಾರಣ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.