ADVERTISEMENT

ತೆಲಂಗಾಣ | ಕರೀಂನಗರ ಪಾಲಿಕೆ: ಬಿಜೆಪಿಗೆ ಅಧಿಕಾರ

ಪಿಟಿಐ
Published 16 ಫೆಬ್ರುವರಿ 2026, 16:44 IST
Last Updated 16 ಫೆಬ್ರುವರಿ 2026, 16:44 IST
   

ಹೈದರಾಬಾದ್: ಕರೀಂನಗರ ನಗರ ಪಾಲಿಕೆಯ ಬಿಜೆಪಿ ಕಾರ್ಪೊರೇಟ್‌ಗಳಾದ ಕೊಲಗಾನಿ ಶ್ರೀನಿವಾಸ್ ಮತ್ತು ವೈ. ಸುನಿಲ್ ರಾವ್ ಅವರು ಮೇಯರ್ ಮತ್ತು ಉಪ ಮೇಯರ್ ಆಗಿ ಸೋಮವಾರ ಆಯ್ಕೆಯಾಗಿದ್ದಾರೆ.

ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರು ಪ್ರತಿಕ್ರಿಯಿಸಿ, ‘ಪ್ರಜಾಪ್ರಭುತ್ವದ ತೀರ್ಪನ್ನು ಬುಡಮೇಲು ಮಾಡಲು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ನಡೆಸಿದ ಎಲ್ಲಾ ಪ್ರಯತ್ನವನ್ನು ಸೋಲಿಸಿ, ಬಿಜೆಪಿ ಕರೀಂ ನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದೆ. ಈ ಮೂಲಕ ನಾವು ನಗರವನ್ನು ವಿಕಸಿತ ತೆಲಂಗಾಣ–ವಿಕಸಿತ ಭಾರತದತ್ತ ಪರಿವರ್ತಿಸಲಿದ್ದೇವೆ’ ಎಂದು ಹೇಳಿದ್ದಾರೆ.

66 ಸ್ಥಾನಗಳಿರುವ ಕರೀಂನಗರ ಪಾಲಿಕೆಯಲ್ಲಿ ಬಿಜೆಪಿ 30 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಮತ್ತೊಂದೆಡೆ, ಕಾಂಗ್ರೆಸ್–14, ಬಿಆರ್‌ಎಸ್–9, ಎಐಎಂಐಎಂ–3, ಎಐಎಫ್‌ಬಿ–3 ಮತ್ತು ಪಕ್ಷೇತರರು 7 ಸ್ಥಾನಗಳನ್ನು ಗೆದ್ದುಕೊಂಡಿದ್ದರು.

ADVERTISEMENT

ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಕರೀಂನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.