ADVERTISEMENT

ಗುಜರಾತ್‌: ಕಾಂಗ್ರೆಸ್‌ ಮತ ತಿಂದು ಶುಭಾರಂಭ ಮಾಡಿದ ಎಎಪಿ

ಐಎಎನ್ಎಸ್
Published 8 ಡಿಸೆಂಬರ್ 2022, 7:52 IST
Last Updated 8 ಡಿಸೆಂಬರ್ 2022, 7:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಹಮದಾಬಾದ್‌: ಗುಜರಾತ್‌ನಲ್ಲಿ ಬಿಜೆಪಿ ದಾಖಲೆಯ ವಿಜಯದತ್ತ ಮುನ್ನುಗುತ್ತಿದ್ದು, ಶುಭಾರಂಭ ಮಾಡಿರುವ ಎಎಪಿ ಪಕ್ಷ ಕಾಂಗ್ರೆಸ್‌ ಮತ ಬುಟ್ಟಿಗೆ ಕೈಹಾಕಿದ್ದು ಶೇ 12ರಷ್ಟು ಮತಗಳನ್ನು ಪಡೆದಿದೆ.

ಕೇಂದ್ರ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ ಮಧ್ಯಾಹ್ನ 12ಗಂಟೆಯ ವೇಳೆಗೆ ಬಿಜೆಪಿ ಶೇ53.33ರಷ್ಟು, ಕಾಂಗ್ರೆಸ್‌ ಶೇ26.9 ಹಾಗೂ ಎಎಪಿ ಶೇ12ರಷ್ಟು ಮತಗಳನ್ನು ಪಡೆದಿವೆ.

ಎಎಪಿಯು ಬಹುತೇಕ ಕಾಂಗ್ರೆಸ್‌ ಮತಗಳನ್ನು ತಿಂದು ಹಾಕಿರುವ ಪರಿಣಾಮ ಕೈ ಪಾಳೆಯ ಹೀನಾಯ ಸೋಲಿಗೆ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಇತ್ತೀಚಿನ (ಮಧ್ಯಾಹ್ನ 1 ಗಂಟೆ) ವರದಿಗಳು ಬಂದಾಗ ಬಿಜೆಪಿ 154, ಕಾಂಗ್ರೆಸ್‌ 20, ಎಎಪಿ 5, ಇತರರು 4 ಕ್ರೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.