ADVERTISEMENT

ಬಿಜೆಪಿಯದ್ದು ಮುಂದಾಲೋಚನೆ ಇಲ್ಲದ, ದುರಹಂಕಾರದ ಪ್ರಣಾಳಿಕೆ: ರಾಹುಲ್ ಗಾಂಧಿ

ಏಜೆನ್ಸೀಸ್
Published 9 ಏಪ್ರಿಲ್ 2019, 6:28 IST
Last Updated 9 ಏಪ್ರಿಲ್ 2019, 6:28 IST
   

ನವದೆಹಲಿ: 2019ರ ಲೋಕಸಭೆ ಚುನಾವಣೆಯ ಬಿಜೆಪಿಪ್ರಣಾಳಿಕೆಯು ಏಕ ವ್ಯಕ್ತಿಯ ದನಿ, ಮುಂದಾಲೋಚನೆ ಇಲ್ಲದಮತ್ತು ದುರಹಂಕಾರದ ಪ್ರಣಾಳಿಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

‘2047ಕ್ಕೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಉದ್ದೇಶದೊಂದಿಗೆ ಬಿಜೆಪಿಯು ಸೋಮವಾರ ಪ್ರಣಾಳಿಕೆ ಬಿಡುಗಡೆಗೊಳಿಸಿತು.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್, ಕಾಂಗ್ರೆಸ್ ಪ್ರಣಾಳಿಕೆಚರ್ಚೆಯ ಮೂಲಕ ತಯಾರಾಗಿದೆ. ಇದು ಲಕ್ಷಾಂತರ ಭಾರತೀಯರ ದನಿ. ಇದು ವಿವೇಕಹಾಗೂ ಶಕ್ತಿಯುತ ಪ್ರಣಾಳಿಕೆ ಎಂದಿದ್ದಾರೆ.

ಆದರೆ ಬಿಜೆಪಿ ಪ್ರಣಾಳಿಕೆ ಮುಚ್ಚಿದ ಕೊಠಡಿಯಲ್ಲಿ, ಏಕವ್ಯಕ್ತಿಯ ನಿರ್ಧರಿತ ಪ್ರಣಾಳಿಕೆ. ಅಲ್ಲದೇ ದೂರದೃಷ್ಟಿಯಿಲ್ಲದ ಸೊಕ್ಕಿನ ಪ್ರಣಾಳಿಕೆ ಎಂದಿದ್ದಾರೆ.

ರಾಷ್ಟ್ರೀಯತೆ ನಮ್ಮ ಸ್ಫೂರ್ತಿ, ಬಡವರ ಸಬಲೀಕರಣ ನಮ್ಮ ತತ್ವ, ಉತ್ತಮ ಆಡಳಿತ ನಮ್ಮ ಮಂತ್ರ ಎಂದು ಪ್ರಣಾಳಿಕೆ ಬಿಡುಗಡೆ ವೇಳೆ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.