ADVERTISEMENT

14 ಕೋಟಿ ಸದಸ್ಯರು; ಬಿಜೆಪಿ ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ: ನಡ್ಡಾ

ಪಿಟಿಐ
Published 14 ಸೆಪ್ಟೆಂಬರ್ 2025, 9:35 IST
Last Updated 14 ಸೆಪ್ಟೆಂಬರ್ 2025, 9:35 IST
<div class="paragraphs"><p>ಜೆಪಿ ನಡ್ಡಾ</p></div>

ಜೆಪಿ ನಡ್ಡಾ

   

ಪಿಟಿಐ ಚಿತ್ರ

ವಿಶಾಖಪಟ್ಟಣ: ಬಿಜೆಪಿ ಪಕ್ಷವು 14 ಕೋಟಿ ಸದಸ್ಯರನ್ನು ಹೊಂದುವ ಮೂಲಕ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ, ಇದರಲ್ಲಿ 2 ಕೋಟಿ ಸದಸ್ಯರು ಸಕ್ರಿಯವಾಗಿದ್ದಾರೆ ಎಂದು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ADVERTISEMENT

ವಿಶಾಖಪಟ್ಟಣದಲ್ಲಿ ಬಿಜೆಪಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಜವಾಬ್ದಾರಿಯುತ ಆಡಳಿತ ನಡೆಸುತ್ತಿದೆ ಎಂದರು.

ದೇಶದಲ್ಲಿ 20 ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರ ಮತ್ತು 13 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಪಕ್ಷವು ದೇಶದಾದ್ಯಂತ 240 ಲೋಕಸಭಾ ಸದಸ್ಯರು, ಸುಮಾರು 1,500 ಶಾಸಕರು ಮತ್ತು 170ಕ್ಕೂ ಹೆಚ್ಚು ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿದೆ ಎಂದು ವಿವರಿಸಿದರು.

ಆಂಧ್ರಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತು ಪ್ರಸ್ತಾಪಿಸಿದ ನಡ್ಡಾ, ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಕೇಂದ್ರ ₹15 ಸಾವಿರ ಕೋಟಿ ನೀಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.