ADVERTISEMENT

ರಿವಾಲ್ವರ್‌ ಹಿಡಿದು ನೃತ್ಯ ಮಾಡಿದ್ದ ಬಿಜೆಪಿ ಶಾಸಕನ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 13:02 IST
Last Updated 12 ಜುಲೈ 2019, 13:02 IST
   

ಡೆಹ್ರಾಡೂನ್‌(ಪಿಟಿಐ): ರಿವಾಲ್ವರ್‌ ಹಿಡಿದು ನೃತ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿಯಿಂದ ಅಮಾನತುಗೊಂಡಿದ್ದ ಶಾಸಕ ಕುನ್ವರ್‌ ಪ್ರಣವ್‌ ಸಿಂಗ್‌ ಅವರನ್ನು ಪಕ್ಷದಿಂದ ಶುಕ್ರವಾರ ಉಚ್ಚಾಟಿಸಲಾಗಿದೆ.

ಸಿಂಗ್‌ ನೃತ್ಯ ಮಾಡುತ್ತಿದ್ದ ವಿಡಿಯೊ ವೈರಲ್‌ ಆಗಿತ್ತು. ವಿಡಿಯೊವನ್ನು ತಿರುಚಲಾಗಿದೆ ಮತ್ತು ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಎಂದು ಸಿಂಗ್‌ ಆರೋಪಿಸಿದ್ದಾರೆ.

ರಿವಾಲ್ವರ್ ಹಿಡಿದುಕೊಂಡು ನೃತ್ಯ ಮಾಡುತ್ತಿದ್ದ ವಿಡಿಯೊವನ್ನು ಪತ್ರಕರ್ತರೊಬ್ಬರು ಸೆರೆ ಹಿಡಿದಿದ್ದರು. ಈ ವಿಡಿಯೊವನ್ನು ಪ್ರಕಟಿಸಿದ್ದ ಪತ್ರಕರ್ತನಿಗೆಕುನ್ವರ್‌ ಪ್ರಣವ್‌ ಸಿಂಗ್‌ ಬೆದರಿಕೆ ಹಾಕಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.