ADVERTISEMENT

ವ್ಯಕ್ತಿ ಮೇಲೆ ಹಲ್ಲೆ, ದರೋಡೆ: ಬಿಹಾರ ಬಿಜೆಪಿ ಶಾಸಕನಿಗೆ ಎರಡು ವರ್ಷ ಜೈಲು

ಪಿಟಿಐ
Published 28 ಮೇ 2025, 10:08 IST
Last Updated 28 ಮೇ 2025, 10:08 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದರ್ಬಾಂಗ (ಬಿಹಾರ): ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪದಲ್ಲಿ ಬಿಜೆಪಿ ಶಾಸಕ ಮಿಶ್ರಿ ಲಾಲ್‌ ಯಾದವ್‌ ಹಾಗೂ ಅವರ ಸಹಚರನಿಗೆ ಬಿಹಾರ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ದರ್ಬಾಂಗದ ಜನಪ್ರತಿನಿಧಿಗಳ ನ್ಯಾಯಾಲಯವು ಮಂಗಳವಾರ ಈ ಆದೇಶ ಹೊರಡಿಸಿದೆ.

ADVERTISEMENT

ಮಿಶ್ರಿ ಲಾಲ್‌, ದರ್ಬಾಂಗ ಜಿಲ್ಲೆಯ ಅಲಿನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

2019ರಲ್ಲಿ ಸ್ಥಳೀಯರೊಬ್ಬರ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ ಪ್ರಕರಣ ಸಂಬಂಧ ಮಿಶ್ರಿ ಲಾಲ್‌ ಹಾಗೂ ಅವರ ಸಹಚರ ಸುರೇಶ್‌ ಯಾದವ್‌ ವಿರುದ್ಧ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಇಬ್ಬರನ್ನೂ ತಪ್ಪಿತಸ್ಥರೆಂದು ಘೋಷಿಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ₹ 1 ಲಕ್ಷ ದಂಡವನ್ನೂ ಹಾಕಿದೆ.

ದಂದ ಪಾವತಿಸದಿದ್ದರೆ, ಒಂದು ತಿಂಗಳು ಹೆಚ್ಚುವರಿ ಜೈಲುವಾಸ ಅನುಭವಿಸಬೇಕಾದೀತು ಎಂದು ಎಚ್ಚರಿಸಿದೆ.

ತೀರ್ಪಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾಸಕ, 'ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ. ಆದರೆ, ಆದೇಶವನ್ನು ಪ್ರಶ್ನಿಸಿ ಪಟ್ನಾ ಹೈಕೋರ್ಟ್‌ ಮೆಟ್ಟಿಲೇರುತ್ತೇನೆ' ಎಂದಿದ್ದಾರೆ.

ಕೋರ್ಟ್‌ ಆದೇಶದ ಪ್ರತಿ ಕೈಸೇರಿದ ಬಳಿಕ ಶಾಸಕರ ಅನರ್ಹತೆ ಪ್ರಕ್ರಿಯೆ ನಡೆಸಲಾಗುವುದು ಎಂದು ವಿಧಾನಸಭಾ ಸಚಿವಾಲಯದ ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.