ADVERTISEMENT

ಅತ್ಯಾಚಾರ ಆರೋಪ: ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧ ಎಫ್‌ಐಆರ್‌ ದಾಖಲು

ಪಿಟಿಐ
Published 7 ಸೆಪ್ಟೆಂಬರ್ 2020, 8:09 IST
Last Updated 7 ಸೆಪ್ಟೆಂಬರ್ 2020, 8:09 IST
ಮಹೇಶ್‌ ನೇಗಿ
ಮಹೇಶ್‌ ನೇಗಿ   

ಡೆಹ್ರಾಡೂನ್‌: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್‌ ನೇಗಿ ವಿರುದ್ಧಅತ್ಯಾಚಾರ ಆರೋಪಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಶಾಸಕ ಮಹೇಶ್‌ ನೇಗಿ ವಿರುದ್ಧ ಅತ್ಯಾಚಾರ ಮತ್ತು ಅವರ ಪತ್ನಿರಿತಾ ನೇಗಿಯ ವಿರುದ್ಧ ಬೆದರಿಕೆ ಆರೋಪದಡಿ ನೆಹರೂ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್‌ ವರಿಷ್ಠಾಧಿಕಾರಿ ಶ್ವೇತ ಚೌಬೆ ಅವರು ತಿಳಿಸಿದರು.

ಈ ಸಂಬಂಧ ಮಹಿಳೆಯೊಬ್ಬರು ಆ.16 ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ ‘ಶಾಸಕ ಮಹೇಶ್‌ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್‌ಎ ಪರೀಕ್ಷೆಗೂ ತಾನು ಸಿದ್ಧ’ ಎಂದು ಮಹಿಳೆ ಹೇಳಿರುವುದಾಗಿಅಧಿಕಾರಿಗಳು ತಿಳಿಸಿದರು.

ADVERTISEMENT

ಈ ಆರೋಪಗಳನ್ನು ತಳ್ಳಿ ಹಾಕಿರುವ ಮಹೇಶ್‌ ನೇಗಿ, ‘ಇದು ನನ್ನ ಹೆಸರಿಗೆ ಕಳಂಕ ತರಲು ನಡೆದಿರುವ ಪಿತೂರಿ. ಇದರಲ್ಲಿ ಕಾಂಗ್ರೆಸ್‌ ನಾಯಕರ ಕೈವಾಡವಿದೆ. ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.