ADVERTISEMENT

ಟಿಎಂಸಿಗೆ ಮರಳಿದ ಬಿಜೆಪಿ ಶಾಸಕ ಸೌಮೆನ್ ರಾಯ್

ಪಿಟಿಐ
Published 4 ಸೆಪ್ಟೆಂಬರ್ 2021, 14:05 IST
Last Updated 4 ಸೆಪ್ಟೆಂಬರ್ 2021, 14:05 IST
   

ಕೋಲ್ಕತ್ತ: ಬಿಜೆಪಿ ಶಾಸಕ ಸೌಮೆನ್ ರಾಯ್ ಶನಿವಾರ ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಪಕ್ಷವನ್ನು ತೊರೆದಿದ್ದು ನನ್ನ ತಪ್ಪು ನಿರ್ಧಾರ ಎಂದು ಅವರು ಹೇಳಿದ್ದಾರೆ.

ಏಪ್ರಿಲ್-ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಪಕ್ಷವನ್ನು ತೊರೆದು ಟಿಎಂಸಿಗೆ ಸೇರಿದ ನಾಲ್ಕನೇ ಬಿಜೆಪಿ ಶಾಸಕರಾಗಿದ್ದಾರೆ.

ಅವರ ರಾಜೀನಾಮೆಯಿಂದ 294 ಸದಸ್ಯರ ಬಲದ ಸದನದಲ್ಲಿ ಬಿಜೆಪಿಯ ಬಲವು ಈಗ 71ಕ್ಕೆ ಇಳಿದಿದೆ.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಕಲಿಯಗಂಜ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಯ್, ಸಿಎಂ ಮಮತಾ ಬ್ಯಾನರ್ಜಿಯವರ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಲು ಪಕ್ಷಕ್ಕೆ ಮರಳಿದ್ದಾಗಿ ಹೇಳಿದ್ದಾರೆ.

‘ನಾನು ಟಿಎಂಸಿಯನ್ನು ತೊರೆದಿದ್ದರೂ ನನ್ನ ಮನಸ್ಸು ಮತ್ತು ಆತ್ಮವು ಟಿಎಂಸಿಯಲ್ಲಿಯೇ ಉಳಿದಿತ್ತು. ಹಲವು ವರ್ಷಗಳಿಂದ ಇದ್ದ ಟಿಎಂಸಿ ಪಕ್ಷ ಬಿಟ್ಟಿದ್ದು ನನ್ನ ತಪ್ಪು’ಎಂದು ಅವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಕೃಷ್ಣನಗರ ದಕ್ಷಿಣ ಕ್ಷೇತ್ರದಿಂದ ಕೇಸರಿ ಪಕ್ಷದ ಟಿಕೆಟ್ ಮೇಲೆ ಆಯ್ಕೆಯಾದ ನಂತರ ಮೇ ತಿಂಗಳಲ್ಲಿ ಪುತ್ರ ಸುಭ್ರಾನ್ಸು ಅವರೊಂದಿಗೆ ಟಿಎಂಸಿಗೆ ಮರಳಿದ್ದರು. ಅವರ ನಂತರ ಇನ್ನೂ ಮೂರು ಶಾಸಕರು ಟಿಎಂಸಿಗೆ ಮರಳಿದ್ದರು.

‘ಯಾರೇ ಪಕ್ಷವನ್ನು ತೊರೆದರೂ ಅದು ಅವರ ನಿರ್ಧಾರ. ಆದರೆ, ಪಕ್ಷವು ಅವರ ಅನರ್ಹತೆಯನ್ನು ಬಯಸುತ್ತದೆ’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.