ADVERTISEMENT

ಶೀಘ್ರದಲ್ಲೇ ಬಿಜೆಪಿಯ 6–7 ಸಂಸದರು ಟಿಎಂಸಿಗೆ: ಜ್ಯೋತಿಪ್ರಿಯ ಮಲ್ಲಿಕ್‌

ಏಜೆನ್ಸೀಸ್
Published 12 ಜನವರಿ 2021, 17:21 IST
Last Updated 12 ಜನವರಿ 2021, 17:21 IST
ಟಿಎಂಸಿ ಬೆಂಬಲಿಗರ ಮೆರವಣಿಗೆ–ಸಾಂದರ್ಭಿಕ ಚಿತ್ರ
ಟಿಎಂಸಿ ಬೆಂಬಲಿಗರ ಮೆರವಣಿಗೆ–ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಬಿಜೆಪಿಯ ಆರರಿಂದ ಏಳು ಮಂದಿ ಸಂಸದರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ಪೂರೈಕೆ ಸಚಿವ ಜ್ಯೋತಿಪ್ರಿಯ ಮಲ್ಲಿಕ್‌ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಮೇ ತಿಂಗಳಲ್ಲಿ ಬಿಜೆಪಿ ಸಂಸದರು ಟಿಎಂಸಿಗೆ ಸೇರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಹಾಬರಾ ಕ್ಷೇತ್ರದ ಶಾಸಕ ಮತ್ತು ಸಚಿವ ಮಲ್ಲಿಕ್‌, ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಟಿಎಂಸಿ ಮಾಜಿ ಮುಖಂಡ ಮತ್ತು ಹಾಲಿ ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಕೋಲ್ಕತ್ತದ ಸಿಮ್ಲಾ ವೀದಿಗೆ ಭೇಟಿ ನೀಡಿದ್ದರ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ್ದು, 'ಅವರು ಬಿಜೆಪಿಯಲ್ಲಿ ನಾಲ್ಕೈದು ತಿಂಗಳು ಕೂಡ ಇರುವರೋ ಇಲ್ಲವೋ ಗೊತ್ತಿಲ್ಲ. ಯಾರೊಬ್ಬರೂ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಆರರಿಂದ ಏಳು ಸಂಸದರು ಟಿಎಂಸಿಗೆ ಸೇರಲಿದ್ದಾರೆ. ಮೇ ಮೊದಲ ವಾರದಲ್ಲಿ ಟಿಎಂಸಿಗೆ ಸೇರಲಿದ್ದಾರೆ. ಬಿಜೆಪಿಗೆ ಸೇರಲು ಟಿಎಂಸಿ ತೊರೆದಿರುವವರು ಇನ್ನೂ ಸಾಲಿನಲ್ಲಿ ಕಾಯುತ್ತಿದ್ದು, ಈಗ ಟಿಎಂಸಿಗೆ ವಾಪಸ್‌ ಆಗಲು ಕೋರುತ್ತಿದ್ದಾರೆ' ಎಂದಿದ್ದಾರೆ.

ADVERTISEMENT

ಪಕ್ಷ ತೊರೆದಿದ್ದ ಬಾಂಕುಡಾ ಶಾಸಕ ತುಷಾರ್‌ ಬಾಬು ನಿನ್ನೆ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.