ADVERTISEMENT

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಶಶಿ ತರೂರ್‌ ಹೇಳಿಕೆ: ಕಾಂಗ್ರೆಸ್‌ ಆಕ್ರೋಶ

ಪಿಟಿಐ
Published 28 ಮೇ 2025, 15:35 IST
Last Updated 28 ಮೇ 2025, 15:35 IST
<div class="paragraphs"><p>ಬುರ್ಕಿಯಲ್ಲಿರುವ ಪೊಲೀಸ್‌ ಠಾಣೆ ಮುಂದೆ ಭಾರತೀಯ ಸೇನೆ ನಿಂತು 1965ರ ಯುದ್ಧದ ವೇಳೆ ತೆಗೆಸಿಕೊಂಡಿದ್ದ ಫೋಟೊ –</p></div>

ಬುರ್ಕಿಯಲ್ಲಿರುವ ಪೊಲೀಸ್‌ ಠಾಣೆ ಮುಂದೆ ಭಾರತೀಯ ಸೇನೆ ನಿಂತು 1965ರ ಯುದ್ಧದ ವೇಳೆ ತೆಗೆಸಿಕೊಂಡಿದ್ದ ಫೋಟೊ –

   

ಪವನ್‌ ಖೇರಾ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಚಿತ್ರ

ನವದೆಹಲಿ: ‘ಭಾರತವು ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಿ ಭಯೋತ್ಪಾದನಾ ನೆಲೆಗಳ ಮೇಲೆ 2016ರಲ್ಲಿ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿತ್ತು. ಈ ರೀತಿ ಹಿಂದೆಂದೂ ಭಾರತ ಮಾಡಿರಲಿಲ್ಲ’ ಎಂದಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ, ‘ಆಪರೇಷನ್‌ ಸಿಂಧೂರ’ ಮತ್ತು ಭಯೋತ್ಪಾದನೆಯನ್ನು ಸರ್ಕಾರದ ನೀತಿಯಾಗಿಸಿಕೊಂಡಿರುವ ಪಾಕಿಸ್ತಾನದಂತಹ ವಿಚಾರಗಳಲ್ಲಿ ಭಾರತದ ನಿಲುವನ್ನು ವಿವರಿಸಲು ಸರ್ವಪಕ್ಷಗಳ ಸಂಸದೀಯ ನಿಯೋಗವೊಂದನ್ನು ಮುನ್ನಡೆಸುತ್ತಿರುವ ಶಶಿ ತರೂರ್‌ ಅವರು ಮಂಗಳವಾರ ಪನಾಮ ದೇಶದಲ್ಲಿ ಮಾತನಾಡಿದ್ದರು.

ADVERTISEMENT

‘ನಾವು ಡಂಗೂರ ಸಾರಿರಲಿಲ್ಲ’

ಪ್ರಧಾನಿ ಮೋದಿಗೂ ಮೊದಲು ಎಲ್‌ಒಸಿ ಅನ್ನು ಯಾರೂ ದಾಟಿರಲಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ನ ಸುವರ್ಣ ಇತಿಹಾಸವನ್ನು ನೀವು ಹೇಗಾದರೂ ಅವಹೇಳನ ಮಾಡಲು ಸಾಧ್ಯ. 1965ರಲ್ಲಿ ಭಾರತೀಯ ಸೇನೆಯು ಪಾಕಿಸ್ತಾನವನ್ನು ಹಲವು ಕಡೆಗಳಿಂದ ಪ್ರವೇಶ ಮಾಡಿತ್ತು. ಪಾಕ್‌ನ ಲಾಹೋರ್‌ ವಲಯವು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. 1971ರಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಭಾಗ ಮಾಡಿತು. ಯುಪಿಎ ಸರ್ಕಾರದಲ್ಲಿ ಹಲವು ಬಾರಿ ನಿರ್ದಿಷ್ಟ ದಾಳಿ ನಡೆಸಲಾಗಿದೆ. ಆದರೆ ರಾಜಕೀಯ ಲಾಭಕ್ಕಾಗಿ ಇದನ್ನು ನಾವು ಡಂಗೂರ ಸಾರಿರಲಿಲ್ಲ. ತಮ್ಮ ಪರವಾಗಿ ಚೆನ್ನಾಗಿ ವಾದ ಮಾಡಲು ಬಿಜೆಪಿಗೆ ಮತ್ತ್ಯಾರೂ ಸಿಗಲಿಲ್ಲ. ಪಾಕಿಸ್ತಾನದ ಮುಖವಾಡ ಕಳಚಿ ಎಂದು ಕಳುಹಿಸಿದರೆ ಪ್ರಧಾನಿ ಮೋದಿ ಅವರನ್ನು ಹೊಗಳುವುದರಲ್ಲಿ ಬ್ಯುಸಿಯಾಗಿದ್ದಾರೆ ಉದಿತ್ ರಾಜ್‌ ಕಾಂಗ್ರೆಸ್‌ ಮುಖಂಡ

ಬುರ್ಕಿ ಕದನದ ಚಿತ್ರ ಹಂಚಿಕೊಂಡ ಖೇರಾ

  1. ಇದು ಬುರ್ಕಿ ಕದನದ (ಲಾಹೋರ್‌ ಕದನ ಎಂದೂ ಕರೆಯಲಾಗುತ್ತದೆ) ಚಿತ್ರ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಯುದ್ಧದ ಮಹತ್ವದ ಘಟನೆ. ಬುರ್ಕಿ ಗ್ರಾಮವು ಲಾಹೋರ್‌ನ ಆಗ್ನೇಯ ದಿಕ್ಕಿಗೆ ಬರುತ್ತದೆ. ಭಾರತ–ಪಾಕಿಸ್ತಾನ ಗಡಿಯ ಹತ್ತಿರದ ಪ್ರದೇಶವಿದು. ಲಾಹೋರ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈ ಗ್ರಾಮವು 11 ಕೀ.ಮಿ ದೂರದಲ್ಲಿದೆ. 

  2. ಮಾಜಿ ಪ್ರಧಾನಿ ಮಹಮೋಹನ್‌ ಸಿಂಗ್‌: ಯುಪಿಎ ಸರ್ಕಾರ ಅಧಿಕಾರಾವಧಿಯಲ್ಲಿ ಹಲವು ನಿರ್ದಿಷ್ಟ ದಾಳಿಗಳನ್ನು ಕೈಗೊಳ್ಳಲಾಗಿದೆ (ಮಾಧ್ಯಮವೊಂದರ ವರದಿಯ ಚಿತ್ರವನ್ನು ಲಗತ್ತಿಸಿ ಮಾಡಿದ ‘ಎಕ್ಸ್‌’ ಪೋಸ್ಟ್‌) ಪವನ್‌ ಖೇರಾ ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಸಾರ ವಿಭಾಗದ ಮುಖ್ಯಸ್ಥ (ಎರಡೂ ‘ಎಕ್ಸ್‌’ ಪೋಸ್ಟ್‌ಗಳನ್ನು ಖೇರಾ ಅವರು ಶಶಿ ತರೂರ್‌ಗೆ ‘ಸಿಸಿ’ ಎಂದು ಬರೆದು ಟ್ಯಾಗ್‌ ಮಾಡಿದ್ದಾರೆ)

‘ತನ್ನದೇ ನಾಯಕರ ಮೇಲೆ ಕ್ಷಿಪಣಿ ದಾಳಿ’

ಪಹಲ್ಗಾಮ್‌ ಭಯೋತ್ಪಾದನಾ ದಾಳಿಯ ವಿಚಾರವಾಗಿ ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನಕ್ಕೆ ‘ಕ್ಲೀನ್‌ ಚಿಟ್‌’ ನೀಡುತ್ತಿದೆ. ಪಾಕ್‌ನ ಡಿಜಿ ಐಎಸ್‌ಪಿಆರ್ (ಅಹಮ್ಮದ್‌ ಶಾರಿಫ್‌ ಚೌಧರಿ) ಅವರಂತೆ ಕಾಂಗ್ರೆಸ್‌ ಪಕ್ಷವು ತನ್ನದೇ ನಾಯಕರ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಆ ಪಕ್ಷವು ಪಾಕಿಸ್ತಾನದ ವಿರುದ್ಧ ಒಂದೇ ಒಂದು ಮಾತನಾಡುವುದಿಲ್ಲ.

–ಶೆಹಜಾದ್‌ ಪೂನಾವಾಲ ಬಿಜೆಪಿ ರಾಷ್ಟ್ರೀಯ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.