ADVERTISEMENT

ಪ್ರತಿಭಟನೆ ಆಯೋಜನೆ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪೊಲೀಸ್ ವಶಕ್ಕೆ

ಪಿಟಿಐ
Published 17 ಮಾರ್ಚ್ 2025, 6:59 IST
Last Updated 17 ಮಾರ್ಚ್ 2025, 6:59 IST
<div class="paragraphs"><p>ಅಣ್ಣಾಮಲೈ</p></div>

ಅಣ್ಣಾಮಲೈ

   

– ಪಿಟಿಐ ಚಿತ್ರ

ಚೆನ್ನೈ: ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ TASMACನಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಪಕ್ಷ ಪ್ರತಿಭಟನೆ ಆಯೋಜಿಸಿದ್ದ ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಸೇರಿಂದತೆ ಅನೇಕ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ADVERTISEMENT

TASMACನಲ್ಲಿ ₹1 ಸಾವಿರ ಕೋಟಿಯ ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಹೀಗಾಗಿ TASMACನ ಮುಖ್ಯ ಕಚೇರಿ ಮುಂದೆ ‍ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಹೇಳಿತ್ತು.

ಕಪ್ಪು ಶರ್ಟ್ ಧರಿಸಿದ್ದ ಅಣ್ಣಾಮಲೈ ಅವರನ್ನು ಅವರ ಮನೆಯ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳಾ ಮೋರ್ಚಾದ ಅಧ್ಯಕ್ಷೆ ಹಾಗೂ ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್, ವಿನೋಜ್ ಪಿ ಸೆಲ್ವಂ ಮತ್ತು ಅಮರ್ ಪ್ರಸಾದ್ ರೆಡ್ಡಿಯವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳಿಸೈ ಸೌಂದರರಾಜನ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಅಣ್ಣಾಮಲೈ ಎಕ್ಸ್‌ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.