ADVERTISEMENT

ಬಿಹಾರ ವಿಧಾನಸಭೆಯ ಸ್ಪೀಕರ್‌ ಆಗಿ ವಿಜಯ್ ಕುಮಾರ್‌ ಸಿನ್ಹಾ ಆಯ್ಕೆ

ಪಿಟಿಐ
Published 25 ನವೆಂಬರ್ 2020, 9:19 IST
Last Updated 25 ನವೆಂಬರ್ 2020, 9:19 IST
ವಿಜಯ್ ಕುಮಾರ್‌ ಸಿನ್ಹಾ    -ಟ್ವಿಟರ್‌ ಚಿತ್ರ
ವಿಜಯ್ ಕುಮಾರ್‌ ಸಿನ್ಹಾ    -ಟ್ವಿಟರ್‌ ಚಿತ್ರ   

ಪಾಟ್ನಾ: ಬಿಹಾರ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ವಿಜಯ್‌ ಕುಮಾರ್‌ ಸಿನ್ಹಾ ಅವರು ಬುಧವಾರ ಆಯ್ಕೆಯಾದರು.

ಮಹಾ ಮೈತ್ರಿ ಕೂಟದಿಂದ ಆರ್‌ಜೆಡಿಯ ಅವಧ್‌ ಬಿಹಾರಿ ಚೌಧರಿ ಅವರನ್ನು ಕಣಕ್ಕಿಳಿಸಿತ್ತು. ಆಡಳಿತರೂಢ ಎನ್‌ಡಿಎ ಅಭ್ಯರ್ಥಿ ವಿಜಯ್‌ ಕುಮಾರ್‌ 126 ಮತಗಳನ್ನು ಪಡೆದು ವಿಜೇತರಾದರು. ಅವಧ್‌ ಅವರಿಗೆ 114 ಮತಗಳು ದೊರೆತವು.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಧಾನ ಪರಿಷತ್‌ ಸದಸ್ಯರು. ಹಾಗಾಗಿ ಅವರು ಮತದಾನದ ವೇಳೆ ಇಲ್ಲಿ ಹಾಜರಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.

ADVERTISEMENT

ಮುಖ್ಯಮಂತ್ರಿಗಳು ಸಭಾ ನಾಯಕರಾಗಿರುವುದರಿಂದ ಅವರ ಉಪಸ್ಥಿತಿ ನ್ಯಾಯ ಸಮ್ಮತವಾಗಿದೆ ಎಂದು ಪ್ರತಿಪಾದಿಸುವ ಮೂಲಕ ವಿರೋಧ ಪಕ್ಷದ ಆಕ್ಷೇಪವನ್ನು ನಿರಾಕರಿಸಿ, ಆಯ್ಕೆ ಪ್ರಕ್ರಿಯೆಯನ್ನು ಮುಂದುವರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.