ADVERTISEMENT

ಜುಹು ಬಂಗಲೆಗೆ ಮಾರ್ಪಾಡು: ಮಹಾರಾಷ್ಟ್ರ ಸಚಿವ ನಾರಾಯಣ ರಾಣೆಗೆ ಬಿಎಂಸಿ ನೋಟಿಸ್‌

ಪಿಟಿಐ
Published 20 ಮಾರ್ಚ್ 2022, 12:58 IST
Last Updated 20 ಮಾರ್ಚ್ 2022, 12:58 IST
ನಾರಾಯಣ ರಾಣೆ
ನಾರಾಯಣ ರಾಣೆ   

ಮುಂಬೈ: ಇಲ್ಲಿನ ತನ್ನ ಜುಹು ಬಂಗಲೆಗೆ ಮಾಡಿದ ಮಾರ್ಪಾಡುಗಳಿಗೆ ಸಂಬಂಧಿಸಿ ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೇಂದ್ರ ಸಚಿವ ನಾರಾಯಣ ರಾಣೆ ಅವರ ಕುಟುಂಬಕ್ಕೆ ಹೊಸದಾಗಿ ನೋಟಿಸ್‌ ಜಾರಿ ಮಾಡಿದೆ.

ಇನ್ನು 15 ದಿನಗಳಲ್ಲಿ ಜುಹು ಬಂಗಲೆಯಲ್ಲಿ ಮಾಡಿರುವ ಬದಲಾವಣೆಗಳನ್ನು ತೆಗೆದುಹಾಕುವಂತೆ ಬಿಎಂಸಿ ಸೂಚಿಸಿದೆ.

‘ಒಂದು ವೇಳೆ ಕ್ರಮ ಕೈಗೊಳ್ಳಲು ಮಾಲೀಕರು ವಿಫಲರಾದರೆ ಪಾಲಿಕೆಯು ಅವರಿಂದ ಬದಲಾವಣೆ ತೆರವಿಗೆ ಆಗುವ ವೆಚ್ಚವನ್ನು ವಸೂಲಿ ಮಾಡುತ್ತದೆ’ ಎಂದು ಮಾರ್ಚ್‌ 16 ರಂದು ಬಿಜೆಪಿ ಮುಖಂಡ ರಾಣೆ ಅವರ ಪತ್ನಿ ಹಾಗೂ ಪುತ್ರರಿಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

ADVERTISEMENT

ಕರಾವಳಿ ನಿಯಂತ್ರಣ ವಲಯದ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಜುಹು ಪ್ರದೇಶದಲ್ಲಿನ ಬಂಗಲೆಯನ್ನು ಅಧಿಕಾರಿಗಳ ತಂಡವೊಂದುಫೆಬ್ರುವರಿ 21 ರಂದು ಪರಿಶೀಲನೆ ನಡೆಸಿತ್ತು.

ಬಿಎಂಸಿ ಮೊದಲು ನೀಡಿದ್ದ ನೋಟಿಸ್‌ಗೆ ಮಾರ್ಚ್‌ 11 ರಂದು ಉತ್ತರ ನೀಡಿದ್ದ ರಾಣೆ ಅವರ ಕುಟುಂಬ ಆರೋಪಗಳನ್ನು ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.