ADVERTISEMENT

ಬೋಯಿಂಗ್ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳಲ್ಲಿ ದೋಷವಿಲ್ಲ: ಏರ್ ಇಂಡಿಯಾ

ರಾಯಿಟರ್ಸ್
Published 22 ಜುಲೈ 2025, 9:22 IST
Last Updated 22 ಜುಲೈ 2025, 9:22 IST
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ   

ಸಾಂದರ್ಭಿಕ ಚಿತ್ರ

ನವದೆಹಲಿ: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ವಿಮಾನ ಅಪಘಾತಕ್ಕೀಡಾದ ಬಳಿಕ ಏರ್ ಇಂಡಿಯಾ ತಾನು ಕಾರ್ಯಾಚರಿಸುವ ಬೋಯಿಂಗ್ ಸಂಸ್ಥೆಗಳ ವಿಮಾನಗಳ ದೋಷಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.

ಇದೀಗ, ಬೋಯಿಂಗ್ 787 ಮತ್ತು ಬೋಯಿಂಗ್ 737ನ ಎಲ್ಲ ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ಕುರಿತಂತೆ ಸಂಪೂರ್ಣ ಮುಂಜಾಗ್ರತಾ ಪರೀಕ್ಷೆ ನಡೆಸಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ಹೇಳಿದೆ.

ADVERTISEMENT

ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787 ಜೆಟ್‌ಲೈನರ್ ವಿಮಾನವು ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಸಮೀಪದ ಹಾಸ್ಟೆಲ್‌ವೊಂದರ ಮೇಲೆ ಪತನವಾಗಿತ್ತು. ಅಪಘಾತದಲ್ಲಿ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಜನ ಮತ್ತು ಹಾಸ್ಟೆಲ್ ಮತ್ತು ಸಮೀಪದಲ್ಲಿದ್ದ 19 ಜನ ಸಾವಿಗೀಡಾಗಿದ್ದರು.

ಈ ಅಪಘಾತದ ಬಳಿಕ ಬೋಯಿಂಗ್ 787-8 ಡ್ರೀಮ್‌ಲೈನರ್‌ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ಗಳ ಸುತ್ತ ಅನುಮಾನ ಕೇಂದ್ರೀಕೃತವಾಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕೂಲಂಕಷ ಪರಿಶೀಲನೆ ನಡೆಸಿದೆ.

ಅಪಘಾತ ನಡೆದು ಒಂದು ವರ್ಷದೊಳಗೆ ಘಟನೆಯ ಅಂತಿಮ ತನಿಖಾ ವರದಿಯನ್ನು ನಿರೀಕ್ಷಿಸಲಾಗಿದೆ.

ಇಂಧನ ನಿಯಂತ್ರಣ ಸ್ವಿಚ್‌ಗಳು ವಿಮಾನದ ಎಂಜಿನ್‌ಗಳಿಗೆ ಇಂಧನ ಹರಿವನ್ನು ನಿಯಂತ್ರಿಸುತ್ತವೆ. ವಿಮಾನ ರನ್‌ವೇ ಮೇಲೆ ಇರುವಾಗ ಎಂಜಿನ್‌ಗಳನ್ನು ಸ್ಟಾರ್ಟ್ ಅಥವಾ ಆಫ್ ಮಾಡಲು ಅಥವಾ ಹಾರಾಟದ ಸಮಯದಲ್ಲಿ ಎಂಜಿನ್ ವೈಫಲ್ಯ ಸಂಭವಿಸಿದಲ್ಲಿ ಎಂಜಿನ್‌ಗಳನ್ನು ಹಸ್ತಚಾಲಿತವಾಗಿ ಸ್ಥಗಿತಗೊಳಿಸಲು ಅಥವಾ ಮರುಪ್ರಾರಂಭಿಸಲು ಪೈಲಟ್‌ಗಳು ಅವುಗಳನ್ನು ಬಳಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.