ADVERTISEMENT

ಭಾರತದಲ್ಲಿ ಪಿ–8ಐ ವಿಮಾನಗಳನ್ನು ತಯಾರಿಸಲು ಬೋಯಿಂಗ್‌ ಸಜ್ಜು

ಪಿಟಿಐ
Published 21 ಸೆಪ್ಟೆಂಬರ್ 2023, 14:31 IST
Last Updated 21 ಸೆಪ್ಟೆಂಬರ್ 2023, 14:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತೀಯ ನೌಕಾಪಡೆಗೆ ಮತ್ತೆ ಆರು ಹೆಚ್ಚುವರಿ ಪಿ–8ಐ ಕಡಲ ಗಸ್ತು ಯುದ್ಧ ವಿಮಾನಗಳನ್ನು ಪೂರೈಸಲು ಆದೇಶ ಎದುರು ನೋಡುತ್ತಿರುವ ಅಮೆರಿಕದ ಏರೋಸ್ಪೇಸ್‌ ಕಂಪನಿ ಬೊಯಿಂಗ್‌, ಭಾರತದಲ್ಲಿ ಪಿ–8ಐ ದೂರ ವ್ಯಾಪ್ತಿಯ ಕಡಲ ಕಣ್ಗಾವಲು ಮತ್ತು ಜಲಾಂತರ್ಗಾಮಿ ನಿಗ್ರಹ ಯುದ್ಧ ವಿಮಾನಗಳನ್ನು ತಯಾರಿಸುವ ಯೋಜನೆಯನ್ನು ತೆರೆದಿಟ್ಟಿದೆ. 

ಸದ್ಯ, ಭಾರತೀಯ ನೌಕಾಪಡೆಯು 12 ಪಿ–8ಐ ವಿಮಾನಗಳನ್ನು ಹೊಂದಿದೆ.

ADVERTISEMENT

ಭಾರತೀಯ ನೌಕಾಪಡೆಯಲ್ಲಿ ಸೇವೆಯಲ್ಲಿರುವ ಪ್ರಸ್ತುತ ಪಿ–8ಐ ವಿಮಾನಗಳ ತುಕಡಿಯನ್ನು ಒದಗಿಸುವಲ್ಲಿ ಕಂಪನಿಯು ಈಗಾಗಲೇ ₹14,135 ಕೋಟಿಯ ಆರ್ಥಿಕತೆಯನ್ನು ಸೃಷ್ಟಿಸಿದೆ ಎಂದು ಕಂಪನಿಯು ಹೇಳಿದೆ. 

ಪಿ–8ಐ ವಿಮಾನಗಳ ತುಕಡಿಯನ್ನು 18 ವಿಮಾನಗಳಿಗೆ ಹೆಚ್ಚಿಸುವುದರಿಂದ ಹೂಡಿಕೆಯು ಸುಮಾರು ₹12,430 ಕೋಟಿ ಹೆಚ್ಚಲಿದೆ. 2032ರ ವೇಳೆಗೆ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವದೇಶೀಕರಣದ ಅವಕಾಶಗಳನ್ನು ಇದು ಸೃಷ್ಟಿಸಲಿದೆ ಎಂದು ಬೋಯಿಂಗ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.