ADVERTISEMENT

ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಫ್ಯಾಶನ್ ಶೋ ಸ್ಥಳದ ಸಮೀಪ ಪ್ರಬಲ ಸ್ಪೋಟ

ಪಿಟಿಐ
Published 4 ಫೆಬ್ರುವರಿ 2023, 6:50 IST
Last Updated 4 ಫೆಬ್ರುವರಿ 2023, 6:50 IST
   

ಇಂಫಾಲ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಮಣಿಪುರದ ಇಂಫಾಲ್‌ನ ಫ್ಯಾಶನ್ ಶೋ ಸ್ಥಳದ ಸಮೀಪದಲ್ಲಿ ಪ್ರಬಲ ಸ್ಪೋಟ ಸಂಭವಿಸಿದೆ.

ಇಂಫಾಲ್‌ನ ಹಟ್ಟ ಕಂಜೇಲ್‌ಬಂಗ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ. ಫ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಶನಿವಾರ ಸ್ಫೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು.

ಸುಧಾರಿತ ಸ್ಫೋಟಕ ಅಥವಾ ಗ್ರೆನೇಡ್ ಯಾವುದರಿಂದ ಸ್ಪೋಟ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.