ADVERTISEMENT

ಮುಂಬೈ: ಆರ್‌ಬಿಐ ಕಚೇರಿಗೆ ಬಾಂಬ್‌ ಬೆದರಿಕೆ

ಪಿಟಿಐ
Published 26 ಡಿಸೆಂಬರ್ 2023, 19:29 IST
Last Updated 26 ಡಿಸೆಂಬರ್ 2023, 19:29 IST
ಆರ್‌ಬಿಐ
ಆರ್‌ಬಿಐ   

ಮುಂಬೈ : ಇಲ್ಲಿನ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಕಚೇರಿ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಬಾಂಬ್‌ ಇಡಲಾಗಿದೆ ಎಂಬ ಬೆದರಿಕೆಯಿರುವ ಇ–ಮೇಲ್‌, ಮಂಗಳವಾರ ಮುಂಬೈನ ಕೆಲವೆಡೆ ಆತಂಕಕ್ಕೆ ಕಾರಣವಾಯಿತು. ಆದರೆ ಪೊಲೀಸರು ನಡೆಸಿದ ಶೋಧದಲ್ಲಿ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಲಿಲ್ಲ.

ಆರ್‌ಬಿಐ ಗವರ್ನರ್‌ ಅವರ ಇ–ಮೇಲ್‌ ಐ.ಡಿಗೆ ಬೆಳಿಗ್ಗೆ 10.50ಕ್ಕೆ ‘khilafat.india@gmail.com’ ಎಂಬ ಐ.ಡಿಯಿಂದ ಬೆದರಿಕೆ ಇ–ಮೇಲ್ ಬಂದಿದೆ. ಆರ್‌ಬಿಐ ನ್ಯೂ ಸೆಂಟ್ರಲ್‌ ಕಚೇರಿ, ಚರ್ಚ್‌ಗೇಟ್‌ ಬಳಿಯ ಎಚ್‌ಡಿಎಫ್‌ಸಿ ಹೌಸ್‌ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಐಸಿಐಸಿಐ ಬ್ಯಾಂಕ್‌ ಟವರ್‌ನಲ್ಲಿ ಮಧ್ಯಾಹ್ನ 1.30ಕ್ಕೆ ಬಾಂಬ್‌ ಸ್ಫೋಟಿಸಲಾಗುವುದು ಎಂಬ ಬೆದರಿಕೆ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಅವರು ರಾಜೀನಾಮೆ ನೀಡಬೇಕು ಎಂದೂ ಇ–ಮೇಲ್‌ನಲ್ಲಿ ಆಗ್ರಹಿಸಲಾಗಿತ್ತು.

ADVERTISEMENT

‘ಇ–ಮೇಲ್‌ನಲ್ಲಿ ಹೆಸರಿಸಿರುವ ಎಲ್ಲ 11 ತಾಣಗಳಲ್ಲೂ ಪೊಲೀಸರು ಶೋಧ ಕಾರ್ಯ ನಡೆಸಿದರು. ಬಾಂಬ್‌ ಅಥವಾ ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.