ADVERTISEMENT

ರಷ್ಯಾ–ಗೋವಾ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ

ಪಿಟಿಐ
Published 10 ಜನವರಿ 2023, 10:57 IST
Last Updated 10 ಜನವರಿ 2023, 10:57 IST
.
.   

ಜಾಮ್‌ನಗರ (ಗುಜರಾತ್‌) (ಪಿಟಿಐ): ರಷ್ಯಾದಿಂದ ಗೋವಾಗೆ ಸೋಮವಾರ ರಾತ್ರಿ ಹೊರಟಿದ್ದ ಅಜರ್‌ ಏರ್‌ ಅಂತರರಾಷ್ಟ್ರೀಯ ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದ ಕಾರಣ ಜಾಮ್‌ನಗರದಲ್ಲಿ ಸೋಮವಾರ ರಾತ್ರಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. ತಪಾಸಣೆ ಬಳಿಕ ಮಂಗಳವಾರ ಮಧ್ಯಾಹ್ನ ವಿಮಾನವು ಗೋವಾಕ್ಕೆ ತೆರಳಿತು.

‘ರಾಷ್ಟ್ರೀಯ ಭದ್ರತಾ ಪಡೆಗಳು ಹಾಗೂ ಬಾಂಬ್‌ ನಿಷ್ಕ್ರಿಯ ಪಡೆಗಳು ವಿಮಾನವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂದು ತಿಳಿದುಬಂದಿತು. ತುರ್ತು ಭೂಸ್ಪರ್ಶವಾಗಿ 15 ಗಂಟೆಗಳ ನಂತರ ವಿಮಾನವು ಗೋವಾಗೆ ಹೊರಟಿತು’ ಎಂದು ಜಾಮ್‌ನಗರದ ಪೊಲೀಸ್‌ ವರಿಷ್ಠಾಧಿಕಾರಿ ಪ್ರೇಮ್‌ಸುಖ್‌ ಡೇಲು ತಿಳಿಸಿದರು.

‘ವಿಮಾನದಲ್ಲಿ 236 ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿ ಇದ್ದರು. ಬಾಂಬ್‌ ಬೆದರಿಕೆ ಬಂದ ಕಾರಣ ಈ ಎಲ್ಲರನ್ನೂ ಸೋಮವಾರ ರಾತ್ರಿ 9.49ಕ್ಕೆ ವಿಮಾನದಿಂದ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕಳುಹಿಸಲಾಗಿತ್ತು. ಪ್ರಯಾಣಿಕರು ಹಾಗೂ ಸಿಬ್ಬಂದಿ ರಾತ್ರಿ ಇಡೀ ವಿಮಾನ ನಿಲ್ದಾಣದ ಲಾಂಜ್‌ನಲ್ಲಿಯೇ ಕಳೆದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.