ADVERTISEMENT

ಪಶ್ಚಿಮ ಬಂಗಾಳದ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ

ಪಿಟಿಐ
Published 24 ಫೆಬ್ರುವರಿ 2026, 14:25 IST
Last Updated 24 ಫೆಬ್ರುವರಿ 2026, 14:25 IST
<div class="paragraphs"><p>ಬಾಂಬ್ ಬೆದರಿಕೆ ಕಾರಣ ಬ್ಯಾಂಕ್‌ಶಾಲ್ ನ್ಯಾಯಾಲಯದ ಹೊರಗೆ ವಕೀಲರು ನೆರೆದಿದ್ದರು </p></div>

ಬಾಂಬ್ ಬೆದರಿಕೆ ಕಾರಣ ಬ್ಯಾಂಕ್‌ಶಾಲ್ ನ್ಯಾಯಾಲಯದ ಹೊರಗೆ ವಕೀಲರು ನೆರೆದಿದ್ದರು

   

(ಪಿಟಿಐ ಚಿತ್ರ)

ಕೋಲ್ಕತ್ತ: ಪಶ್ಚಿಮ ಬಂಗಾಳದ ಹಲವಾರು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದ ಕಾರಣ ನ್ಯಾಯಾಲಯಗಳ ಆವರಣದಲ್ಲಿ ಶೋಧ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಸ್ಥಳಾಂತರ ಮಾಡಲಾಯಿತು. ಇದರಿಂದಾಗಿ ಮಂಗಳವಾರ ನ್ಯಾಯಾಂಗದ ಕಲಾಪದಲ್ಲಿ ವ್ಯತ್ಯಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಬರ್ದಮಾನ್ ಜಿಲ್ಲೆಯ ಆಸನ್‌ಸೋಲ್ ಮತ್ತು ದುರ್ಗಾಪುರದಲ್ಲಿರುವ ನಗರ ಸೆಷನ್ಸ್ ನ್ಯಾಯಾಲಯ, ಸಿಜೆಎಂ (ಬ್ಯಾಂಕ್‌ಶಾಲ್) ನ್ಯಾಯಾಲಯ ಮತ್ತು ಉಪ–ವಿಭಾಗೀಯ ನ್ಯಾಯಾಲಯಗಳಿಗೆ ಬೆಳಿಗ್ಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಲ್ಕತ್ತ ಪೊಲೀಸ್ ಬಾಂಬ್ ಸ್ಕ್ವಾಡ್ ಸಿಬ್ಬಂದಿ ಶ್ವಾನದಳದೊಂದಿಗೆ ನ್ಯಾಯಾಲಯಗಳ ಆವರಣವನ್ನು ಪರಿಶೀಲಿಸಿದರು. ಆದಾಗ್ಯೂ, ಶೋಧ ಕಾರ್ಯಾಚರಣೆಯ ವೇಳೆ ನ್ಯಾಯಾಲಯಗಳಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.