ADVERTISEMENT

ಎಂವಿಎ ಒಕ್ಕೂಟದ ಬಂಧ ಬಿಗಿಯಾಗಿದೆ; ಬಿರುಕು ಮೂಡಿಸುವ ಯತ್ನ ಫಲಿಸದು -ಸಂಜಯ್ ರಾವುತ್

ಮಹಾರಾಷ್ಟ್ರ ಸರ್ಕಾರ ಕುರಿತು ಶಿವಸೇನಾ ಸಂಸದ ಸಂಜಯ್ ರಾವುತ್‌

ಪಿಟಿಐ
Published 21 ಜೂನ್ 2021, 11:00 IST
Last Updated 21 ಜೂನ್ 2021, 11:00 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ಮಹಾರಾಷ್ಟ್ರದಲ್ಲಿರುವ ಮಹಾ ವಿಕಾಸ ಆಘಾಡಿ (ಎಂವಿಎ) ನೇತೃತ್ವದ ಸರ್ಕಾರ ಮೈತ್ರಿ ಸರ್ಕಾರವೊಂದು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಉದಾಹರಣೆಯಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್‌ ಹೇಳಿದ್ಧಾರೆ.

‘ಆಡಳಿತಾರೂಢ ಮೈತ್ರಿಕೂಟದಲ್ಲಿರುವ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಬಿರುಕು ಉಂಟು ಮಾಡುವ ಪ್ರಯತ್ನಗಳು ಎಂದಿಗೂ ಸಾಕಾರವಾಗಿಲ್ಲ. ಈ ಮೂರೂ ಪಕ್ಷಗಳ ನಡುವಿನ ಬಾಂಧವ್ಯ ಅಷ್ಟು ಬಿಗಿಯಾಗಿದೆ‘ ಎಂದು ಅವರು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪತೊಲೆ ಅವರು ‘ಮುಂದಿನ ಚುನಾವಣೆಗಳಲ್ಲಿ ನಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ‘ ಎಂಬ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾವುತ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಧಾರಗಳಾಗಿಲ್ಲ. ಸೂಕ್ತ ಸಮಯದಲ್ಲಿ ಆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸದ್ಯಕ್ಕೆ ಈ ಮೈತ್ರಿಕೂಟದ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರೈಸಬೇಕು ಎಂಬುದು ಮೂರೂ ಪಕ್ಷಗಳಿಗಿರುವ ಸಂಕಲ್ಪ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಈ ಮೈತ್ರಿಕೂಟದ ಆತ್ಮವಾಗಿದೆ‘ ಎಂದು ಸಂಜಯ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.