ADVERTISEMENT

ಕೇಂದ್ರ ನೌಕರರಿಗೆ ಬೋನಸ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 19:17 IST
Last Updated 19 ಅಕ್ಟೋಬರ್ 2021, 19:17 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ನೌಕರರಿಗೆ 2020–21ನೇ ಸಾಲಿಗೆ ಉತ್ಪಾದನೆ ಆಧಾರಿತವಲ್ಲದ ಬೋನಸ್‌ ಅನ್ನು ಸರ್ಕಾರವು ಮಂಗಳವಾರ ಮಂಜೂರು ಮಾಡಿದೆ.

ಅರೆಸೇನಾ ಪಡೆ ಮತ್ತು ಸಶಸ್ತ್ರ ಪಡೆಯ ಸಿಬ್ಬಂದಿಯೂ ಬೋನಸ್‌ಗೆ ಅರ್ಹರು ಎಂದು ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಹೇಳಿಕೆಯು ತಿಳಿಸಿದೆ.

2021ರ ಮಾರ್ಚ್‌ 31ರವರೆಗೆ ಕರ್ತವ್ಯದಲ್ಲಿದ್ದ ಮತ್ತು ಆ ವರೆಗೆ ಕನಿಷ್ಠ ಆರು ತಿಂಗಳು ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಯು ಬೋನಸ್‌ಗೆ ಅರ್ಹರಾಗುತ್ತಾರೆ.

ADVERTISEMENT

ಕೇಂದ್ರ ಸರ್ಕಾರದ ಗ್ರೂಪ್‌ ಸಿ ಮತ್ತು ಗ್ರೂಪ್‌ ಬಿಯಲ್ಲಿರುವ ಗೆಜೆಟೆಡ್‌ ಅಲ್ಲದ ಸಿಬ್ಬಂದಿಗೆ ಈ ಬೋನಸ್‌ ನೀಡಲಾಗುತ್ತದೆ. ಆದರೆ, ಅವರು ಉತ್ಪಾದನೆ ಆಧಾರಿತ ಬೋನಸ್ ಯೋಜನೆಯ ವ್ಯಾಪ್ತಿಯಲ್ಲಿ ಇರಬಾರದು.

ತಿಂಗಳಿಗೆ ಲೆಕ್ಕ ಹಾಕಲಾಗುವ ಬೋನಸ್‌ನ ಗರಿಷ್ಠ ಮೊತ್ತವನ್ನು ₹7,000 ಎಂದು ನಿಗದಿ ಮಾಡಲಾಗಿದೆ.

2021ರ ಮಾರ್ಚ್‌ 31ರ ಒಳಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟವರು, ನಿವೃತ್ತರಾದವರು ಅಥವಾ ಮೃತಪ‍ಟ್ಟವರ ಪೈಕಿ ರಾಜೀನಾಮೆ ಕೊಟ್ಟವರಿಗೆ ಬೋನಸ್‌ಗೆ ಅರ್ಹತೆ ಇಲ್ಲ. ನಿವೃತ್ತರಾದವರು, ವೈದ್ಯಕೀಯ ಕಾರಣದಿಂದ ನಿವೃತ್ತಿ ತೆಗೆದುಕೊಂಡವರಿಗೆ ಮಾತ್ರ ಬೋನಸ್‌ ದೊರೆಯುತ್ತದೆ. ಆದರೆ, ಅವರು ಆ ಆರ್ಥಿಕ ವರ್ಷದಲ್ಲಿ ಕನಿಷ್ಠ ಆರು ತಿಂಗಳು ಕರ್ತವ್ಯ
ನಿರ್ವಹಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.