ADVERTISEMENT

ಭಾರತ - ಚೀನಾ ನಡುವಿನ ಗಡಿ ಪರಿಸ್ಥಿತಿ ಸಹಜವಾಗಿಲ್ಲ: ಜೈಶಂಕರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 10:43 IST
Last Updated 25 ಮಾರ್ಚ್ 2022, 10:43 IST
ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್‌
ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಮತ್ತು ಭಾರತದ ವಿದೇಶಾಂಗ ಸಚಿವ ಜೈಶಂಕರ್‌    

ದೆಹಲಿ: ಭಾರತದ ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ದೆಹಲಿಯಲ್ಲಿ ಶುಕ್ರವಾರ ಸುಮಾರು ಮೂರು ಗಂಟೆಗಳಷ್ಟು ದೀರ್ಘ ಕಾಲದ ಮಾತುಕತೆ ನಡೆಯಿತು.

ಚರ್ಚೆ ನಂತರಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಭಾರತೀಯವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ್‌, ' ವಿಶಾಲ ಮತ್ತು ವಸ್ತುನಿಷ್ಠ ಕಾರ್ಯಸೂಚಿಯೊಂದನ್ನುಮುಕ್ತ, ಪ್ರಾಮಾಣಿಕ ವಾತಾವರಣದಲ್ಲಿ ಚರ್ಚಿಸಲಾಯಿತು' ಎಂದು ತಿಳಿಸಿದರು.

'ಗಡಿಯಲ್ಲಿ ಸಹಜತೆಮರುಸ್ಥಾಪಿಸಬೇಕಿದ್ದರೆ,ನಿಸ್ಸಂಶಯವಾಗಿ ಶಾಂತಿ ಮತ್ತು ನೆಮ್ಮದಿಯ ವಾತಾವರಣದ ಮರುಸ್ಥಾಪನೆ ಅಗತ್ಯವಿದೆ. ಆದರೆ, 1993-96ರ ಒಪ್ಪಂದಗಳಿಗೆ ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿರುವುದನ್ನು ಗಮನಿಸಿದರೆ (ಪ್ರಸ್ತುತ ಚೀನಾದೊಂದಿಗೆ) ನಮ್ಮ ಸಂಬಂಧವು ಸಹಜವಾಗಿಲ್ಲ'ಎಂದು ಅವರು ಹೇಳಿದರು.

ADVERTISEMENT

'ಗಡಿಯಲ್ಲಿ ಈ ವರೆಗೆಬಹಳ ದೊಡ್ಡ ಪ್ರಮಾಣದಲ್ಲಿ ಸೇನೆ ನಿಯೋಜನೆಗೊಂಡಿದೆ. ಗಡಿ ಪರಿಸ್ಥಿತಿ ಸಹಜವಾಗಿಲ್ಲ. ಇನ್ನೂ ಹಲವು ಪ್ರದೇಶಗಳುಸಂಘರ್ಷಮಯ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಇದರ ಹೊರತಾಗಿಯೂ ನಾವು ಪ್ಯಾಂಗಾಂಗ್ ತ್ಸೋ ಸೇರಿದಂತೆ ಕೆಲವು ಸಂಘರ್ಷಗಳನ್ನು ಬಗೆಹರಿಸಿಕೊಳ್ಳುವಲ್ಲಿ ಪ್ರಗತಿ ಸಾಧಿಸಿದ್ದೇವೆ. ಇದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದು ನಮ್ಮ ಇಂದಿನ ಚರ್ಚೆಯ ವಿಷಯವಾಗಿತ್ತು. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ಈ ವರೆಗೆ 15 ಸುತ್ತಿನ ಮಾತುಕತೆಗಳಾಗಿವೆ' ಎಂದು ಜೈಶಂಕರ್‌ ತಿಳಿಸಿದರು.

'ಚೀನಾಕ್ಕೆ ಹಿಂದಿರುಗಿದ ನಂತರ ವಿಷಯವನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸುವುದಾಗಿ ವಿದೇಶಾಂಗ ಸಚಿವ ವಾಂಗ್ ಯಿ ನನಗೆ ಭರವಸೆ ನೀಡಿದ್ದಾರೆ.ವಾಂಗ್ ಯಿ ಅವರೊಂದಿಗಿನ ಮಾತುಕತೆಯ ವೇಳೆಗಡಿ ವಿಷಯದ ಕುರಿತ ನಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದೇನೆ' ಎಂದು ಅವರು ಹೇಳಿದರು.

ಅಫ್ಘಾನಿಸ್ತಾನ ಮತ್ತು ಉಕ್ರೇನ್ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಕುರಿತೂ ಇದೇ ವೇಳೆ ಅಭಿಪ್ರಾಯಗಳನ್ನು ವಿನಿಯಮ ಮಾಡಿಕೊಳ್ಳಲಾಯಿತು ಎಂದು ಜೈಶಂಕರ್‌ ತಿಳಿಸಿದರು.

'ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಭಾರತದ ನೀತಿಯುವಿಶ್ವಸಂಸ್ಥೆಯಭದ್ರತಾ ಮಂಡಳಿಯ ನಿರ್ಣಯ-2593ರಿಂದ ಪ್ರೇರಿತವಾಗಿದೆ.ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ಕಾರ್ಯವಿಧಾನಗಳು ಮತ್ತು ದೃಷ್ಟಿಕೋನವನ್ನು ಪರಸ್ಪರ ಚರ್ಚಿಸಿದೆವು. ಆದರೆ ರಾಜತಾಂತ್ರಿಕತೆ ಮತ್ತುಮಾತುಕತೆಯ ಮಾರ್ಗವುಆದ್ಯತೆಯಾಗಿರಬೇಕು ಎಂದು ಇಬ್ಬರೂ ಒಪ್ಪಿಕೊಂಡಿದ್ದೇವೆ' ಎಂದು ಅವರು ಹೇಳಿದರು.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ 'ಕ್ವಾಡ್‌'ಸಭೆಯಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದುಜೈಶಂಕರ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.