ADVERTISEMENT

ಶ್ವಾನವಾಗಿ ಹುಟ್ಟಿ, ಯೋಧರಾಗಿ ನಿವೃತ್ತಿ: ಹೀಗೊಂದು ಕಹಾನಿ...

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 9:43 IST
Last Updated 20 ನವೆಂಬರ್ 2019, 9:43 IST
ಸಿಐಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಾಯಿ
ಸಿಐಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಾಯಿ   

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(CISF) ಭಾಗವಾಗಿದ್ದುಕೊಂಡುಪ್ಯಾರಾ ಮಿಲಿಟರಿ ಪಡೆಯೊಂದಿಗೆ ಎಂಟು ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತಗೊಂಡ ಶ್ವಾನಗಳಿಗೆ ಮಂಗಳವಾರ ಪೂರ್ಣ ಗೌರವಗಳೊಂದಿಗೆ ಬೀಳ್ಕೊಡುಗೆ ನೀಡಲಾಯಿತು.

ಈ ಕುರಿತು ಸಿಐಎಸ್ಎಫ್ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, "ಶ್ವಾನವಾಗಿ ಜನಿಸಿದ, ಸೈನಿಕನಾಗಿ ನಿವೃತ್ತರಾದ" ಎಂದು ಶ್ವಾನಗಳನ್ನು ಗೌರವಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ. ದೆಹಲಿ ಮೆಟ್ರೊಗೆ ನಿಯೋಜಿಸಲಾಗಿದ್ದ ಸಿಐಎಸ್ಎಫ್ ತಂಡದ ಭಾಗವಾಗಿ ಶ್ವಾನಗಳು ಕಾರ್ಯನಿರ್ವಹಿಸಿದ್ದವು. ದೆಹಲಿ ಮೆಟ್ರೊದ ಸಿಐಎಸ್ಎಫ್ ಘಟಕ (ಡಿಎಂಆರ್‌ಸಿ) ಆಯೋಜಿಸಿದ್ದ ಸಮಾರಂಭದಲ್ಲಿ ಶ್ವಾನಗಳಿಗೆ ಮೆಮೆಂಟೋ, ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ವರದಿಗಳ ಪ್ರಕಾರ, ಸಿಐಎಸ್‌ಎಫ್ ಅದರ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ "ನಿವೃತ್ತಿ" ಕಾರ್ಯಕ್ರಮವನ್ನು ಶ್ವಾನಗಳಿಗಾಗಿ ಆಯೋಜಿಸಿತ್ತು. ಸಿಐಎಸ್‌ಎಫ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶ್ವಾನಗಳಸಮರ್ಪಣೆ ಮತ್ತು ಶ್ರದ್ಧೆಯನ್ನುಅಭಿನಂದಿಸಿ ಬೀಳ್ಕೊಡುಗೆ ಸಂದೇಶವನ್ನು ಪೋಸ್ಟ್ ಮಾಡಿದೆ.

ADVERTISEMENT

ತರಬೇತಿ ಪಡೆದಿದ್ದ ಶ್ವಾನಗಳು ತಮ್ಮ ನಿಸ್ವಾರ್ಥ ಕರ್ತವ್ಯಕ್ಕಾಗಿ ಸಮಾರಂಭದಲ್ಲಿ ವಿಶೇಷ ಔತಣವನ್ನು ಪಡೆದವು. ಸಮಾರಂಭದ ಬಳಿಕ ಅವುಗಳನ್ನು ದೆಹಲಿ ಮೂಲದ ಎನ್‌ಜಿಒವೊಂದಕ್ಕೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.