ADVERTISEMENT

ಮಧ್ಯಂತರ ಚುನಾವಣೆಗೆ ಉದ್ಧವ್‌ ಠಾಕ್ರೆ ಆಗ್ರಹ

ಮೂಲ ಶಿವಸೇನಾಕ್ಕೇ ಬಿಲ್ಲು–ಬಾಣದ ಚಿಹ್ನೆ: ಪ್ರತಿಪಾದನೆ

ಪಿಟಿಐ
Published 8 ಜುಲೈ 2022, 11:21 IST
Last Updated 8 ಜುಲೈ 2022, 11:21 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ:ಶಿವಸೇನಾದ ಬಂಡಾಯ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಪಕ್ಷ ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಬಹುದು ಎನ್ನುವ ಚರ್ಚೆಗಳು ನಡೆಯುತ್ತಿರುವಾಗಲೇ, ಶಿವಸೇನಾದ ಅಧ್ಯಕ್ಷ ಉದ್ಧವ್‌ ಠಾಕ್ರೆ ‘ಬಿಲ್ಲು ಮತ್ತು ಬಾಣ’ದ ಚಿಹ್ನೆ ಮೂಲ ಪಕ್ಷದ ಜತೆಗೆ ಇರಲಿದೆ ಎಂದು ಶುಕ್ರವಾರ ಪ್ರತಿಪಾದಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್‌, ‘ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆಗೆ ನಡೆಸಬೇಕು.ನನ್ನ ನೇತೃತ್ವದ ಮಹಾ ವಿಕಾಸ್‌ ಆಘಾಡಿ ಸರ್ಕಾರವನ್ನು ಉರುಳಿಸಲು ಜನರಿಗೆ ಅವಕಾಶ ನೀಡಲಿ’ ಎಂದು ಸವಾಲು ಹಾಕಿದರು.

‘ರಾಜ್ಯದಲ್ಲಿ 2019ರಲ್ಲಿ ಜನರು ಯಾವ ರೀತಿ ಘನತೆಯಿಂದ ಸರ್ಕಾರ ಬದಲಿಸಿದರೋ ಅದೇ ರೀತಿಯೇ ಈಗಲೂ ಆಗಲಿ. ಆದರೆ, ಕಳೆದ ವಾರವಿಶ್ವಾಸಘಾತಕವಾಗಿ ಸರ್ಕಾರ ಬದಲಾಗುವುದು ಬೇಡ. ನೀವುಅವರ ಸಂಪರ್ಕದಲ್ಲಿ ಇದ್ದು, ನಿಮ್ಮದೇ ಪಕ್ಷಕ್ಕೆ ನಂಬಿಕೆ ದ್ರೋಹ ಮಾಡಿದ್ದೀರಿ’ ಎಂದು ಏಕನಾಥ್‌ ಶಿಂಧೆ ಹೆಸರು ಉಲ್ಲೇಖಿಸದೇ ಠಾಕ್ರೆ ವಾಗ್ದಾಳಿ ನಡೆಸಿದರು.

ADVERTISEMENT

ಜುಲೈ 11ರಂದು ಸುಪ್ರೀಂಕೋರ್ಟ್‌ ನೀಡಲಿರುವ ತೀರ್ಪು ಶಿವಸೇನಾದ ಭವಿಷ್ಯವನ್ನಷ್ಟೇ ಅಲ್ಲ, ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನೂ ನಿರ್ಧರಿಸಲಿದೆ ಎಂದರು.

ಸೇನಾದ ಬಂಡಾಯ ಶಾಸಕರ ಪೈಕಿ 16 ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯ ತೀರ್ಪು ಅಂದು ಹೊರಬೀಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.