ADVERTISEMENT

ಜಮ್ಮು–ಕಾಶ್ಮೀರ: ಪಕ್ಷದ ಪರ ವರದಿ ಮಾಡಲು ಪತ್ರಕರ್ತರಿಗೆ ಲಂಚ ನೀಡಿದ ಬಿಜೆಪಿ

ಎಫ್‌ಐಆರ್ ದಾಖಲಿಸಲು ಚುನಾವಣಾ ಅಧಿಕಾರಿ ಮನವಿ

ಏಜೆನ್ಸೀಸ್
Published 8 ಮೇ 2019, 2:20 IST
Last Updated 8 ಮೇ 2019, 2:20 IST
ಲಡಾಖ್‌ ಚುನಾವಣಾಧಿಕಾರಿ ಅವನಿ ಲವಾಸ ಮತ್ತು ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ (ಚಿತ್ರ ಕೃಪೆ: ಫೇಸ್‌ಬುಕ್)
ಲಡಾಖ್‌ ಚುನಾವಣಾಧಿಕಾರಿ ಅವನಿ ಲವಾಸ ಮತ್ತು ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ (ಚಿತ್ರ ಕೃಪೆ: ಫೇಸ್‌ಬುಕ್)   

ಶ್ರೀನಗರ:ಪಕ್ಷದ ಪರ ವರದಿ ಮಾಡಲು ಲಡಾಖ್‌ನ ಲೇಹ್‌ನಲ್ಲಿ ಪತ್ರಕರ್ತರಿಗೆ ಬಿಜೆಪಿ ಲಂಚ ನೀಡಿದ್ದ ಆರೋಪ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಲಡಾಖ್‌ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಆ ಸಂದರ್ಭ, ಬಿಜೆಪಿ ಲಂಚ ನೀಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಚುನಾವಣಾಧಿಕಾರಿ ಅವನಿ ಲವಾಸ ಆದೇಶಿಸಿದ್ದರು.

‘ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರ ಮೂಲಕ ನ್ಯಾಯಾಲಯಕ್ಕೆ ಮಂಗಳವಾರ ಮನವಿ ಮಾಡಿದ್ದೇವೆ. ಈವರೆಗೆ ನ್ಯಾಯಾಲಯದಿಂದ ಯಾವುದೇ ಆದೇಶ ಬಂದಿಲ್ಲ’ ಎಂದುಅವನಿ ತಿಳಿಸಿದ್ದಾರೆ.

ADVERTISEMENT

ಮೇ 2ರಂದು ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಪತ್ರಕರ್ತರಿಗೆ ಲಂಚ ನೀಡಿದ್ದಾರೆ ಎಂದು ಲೇಹ್ ಪ್ರೆಸ್‌ಕ್ಲಬ್ ಸಹ ಜಿಲ್ಲಾ ಚುನಾವಣಾಧಿಕಾರಿ ಅವನಿ ಅವರಿಗೆ ದೂರು ನೀಡಿತ್ತು.

ಜಮ್ಮು ಮತ್ತು ಕಾಶ್ಮೀರದ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಅವನಿ ಅವರುಚುನಾವಣಾ ಆಯುಕ್ತ ಅಶೋಕ್ ಲವಾಸ ಅವರ ಮಗಳು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್‌ಚಿಟ್‌ ನೀಡುವುದನ್ನು ಚುನಾವಣಾ ಆಯುಕ್ತ ಅಶೋಕ್ ಲವಾಸ ವಿರೋಧಿಸಿದ್ದರು ಎಂದು ಇತ್ತೀಚೆಗೆ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.